ADVERTISEMENT

ಅಕ್ಟೋಬರ್‌ನಲ್ಲಿ ಅಮೆರಿಕಕ್ಕೆ ರಫ್ತು ಶೇ 8ರಷ್ಟು ಇಳಿಕೆ:ಕೇಂದ್ರ ವಾಣಿಜ್ಯ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 15:22 IST
Last Updated 17 ನವೆಂಬರ್ 2025, 15:22 IST
   

ನವದೆಹಲಿ: ಅಕ್ಟೋಬರ್‌ ತಿಂಗಳಿನಲ್ಲಿ ಅಮೆರಿಕಕ್ಕೆ ದೇಶದ ರಫ್ತು ಶೇ 8.58ರಷ್ಟು ಇಳಿಕೆಯಾಗಿದ್ದು, ₹55,822 ಕೋಟಿಯಷ್ಟಾಗಿದೆ. ಸತತ ಎರಡನೇ ತಿಂಗಳು ದೇಶದ ರಫ್ತು ಅಮೆರಿಕಕ್ಕೆ ಇಳಿಕೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.

ಆಮದು ಪ್ರಮಾಣ ಶೇ 13.89ರಷ್ಟು ಹೆಚ್ಚಾಗಿದ್ದು, ₹39,515 ಕೋಟಿಯಾಗಿದೆ ಎಂದು ತಿಳಿಸಿದೆ. ಏಪ್ರಿಲ್‌ನಿಂದ ಅಕ್ಟೋಬರ್ ಅವಧಿಯಲ್ಲಿ ದೇಶದ ರಫ್ತು ಶೇ 10.15ರಷ್ಟಿದ್ದರೆ, ಆಮದು ಶೇ 9.73ರಷ್ಟಿತ್ತು. 

ಚೀನಾಗೆ ದೇಶದ ರಫ್ತು ಅಕ್ಟೋಬರ್‌ನಲ್ಲಿ ಶೇ 42.35ರಷ್ಟು ಹೆಚ್ಚಾಗಿದ್ದರೆ, ಆಮದು ಶೇ 15.63ರಷ್ಟಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.