ನವದೆಹಲಿ: ಅಮೆರಿಕದ ಸುಂಕ ಜಾರಿಯು, ಮುಂದಿನ ಆರು ತಿಂಗಳಿನಲ್ಲಿ ದೇಶದ ಜವಳಿ ವಲಯದ ರಫ್ತಿನ ನಾಲ್ಕನೇ ಒಂದು ಭಾಗದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಅಲ್ಲದೆ, ಕಾರ್ಯಾದೇಶ ರದ್ದುಗೊಳ್ಳುವ ಸಾಧ್ಯತೆ ಇದೆ ಎಂದು ಸಹ ಹೇಳಿದ್ದಾರೆ.
ಆದರೆ, ಡಿಸೆಂಬರ್ 31ರ ವರೆಗೆ ಸುಂಕ ರಹಿತ ಹತ್ತಿ ಆಮದನ್ನು ವಿಸ್ತರಿಸಿರುವುದು ದೇಶದ ಜವಳಿ ಉದ್ಯಮಕ್ಕೆ ಸ್ವಲ್ಪ ನೆಮ್ಮದಿ ನೀಡುವ ನಿರೀಕ್ಷೆಯಿದೆ. ವಲಯವು ಮುಕ್ತ ವ್ಯಾಪಾರ ಒಪ್ಪಂದಗಳನ್ನು ಬಳಸಿಕೊಳ್ಳುವ ಮೂಲಕ ಅಮೆರಿಕ ಹೊರತುಪಡಿಸಿ ಪರ್ಯಾಯ ಮಾರುಕಟ್ಟೆಗಳನ್ನು ಹುಡುಕಿ, ಸುಂಕದ ಪರಿಣಾಮ ತಗ್ಗಿಸಲು ನೋಡುತ್ತಿದೆ ಎಂದು ಹೇಳಿದ್ದಾರೆ.
ಅಮೆರಿಕವು ದೇಶದ ಸಿದ್ಧ ಉಡುಪು ಉದ್ಯಮಕ್ಕೆ ಅತಿದೊಡ್ಡ ಮಾರುಕಟ್ಟೆಯಾಗಿದ್ದು, 2024-25ರಲ್ಲಿ, ಜವಳಿ ಮತ್ತು ಸಿದ್ಧ ಉಡುಪು ವಲಯದ ಒಟ್ಟಾರೆ ಗಾತ್ರವು ₹15.68 ಲಕ್ಷ ಕೋಟಿಯಾಗಿದೆ. ಇದರಲ್ಲಿ ರಫ್ತು ಮೌಲ್ಯ ₹3.24 ಲಕ್ಷ ಕೋಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.