ADVERTISEMENT

ವಿ–ಗಾರ್ಡ್: ವಾಟರ್ ಹೀಟರ್ ಸರಣಿ ಬಿಡುಗಡೆ 

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 13:40 IST
Last Updated 29 ಜೂನ್ 2025, 13:40 IST
ವಿ–ಗಾರ್ಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಿಥುನ್ ಚಿತ್ತಿಲಪಿಲ್ಲಿ ಉತ್ಪನ್ನ ಬಿಡುಗಡೆ ಮಾಡಿ ಮಾತನಾಡಿದರು
ವಿ–ಗಾರ್ಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಿಥುನ್ ಚಿತ್ತಿಲಪಿಲ್ಲಿ ಉತ್ಪನ್ನ ಬಿಡುಗಡೆ ಮಾಡಿ ಮಾತನಾಡಿದರು   

ಬೆಂಗಳೂರು: ವಿದ್ಯುತ್‌ ಉಪಕರಣಗಳ ತಯಾರಿಕಾ ಸಂಸ್ಥೆ ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್, ‘ಲಕ್ಸ್ ಕ್ಯೂಬ್’ ಸರಣಿಯ ವಾಟರ್ ಹೀಟರ್‌ಗಳನ್ನು ಬಿಡುಗಡೆ ಮಾಡಿದೆ.

ಹೊಸ ಸರಣಿಯು ಲಕ್ಸ್ ಕ್ಯೂಬ್, ಲಕ್ಸ್ ಕ್ಯೂಬ್ ಡಿಜಿ ಮತ್ತು ಲಕ್ಸ್ ಕ್ಯೂಬ್ ಸ್ಮಾರ್ಟ್ ಎನ್ನುವ ಮೂರು ಮಾದರಿಗಳನ್ನು ಹೊಂದಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಐಒಟಿ ಸ್ಮಾರ್ಟ್ ಕನೆಕ್ಟಿವಿಟಿಯೊಂದಿಗೆ, ಬಳಕೆದಾರರು ಐಒಎಸ್ ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯವಿರುವ ವಿ-ಗಾರ್ಡ್ ಸ್ಮಾರ್ಟ್ ಆ್ಯಪ್‌ ಮೂಲಕ ಈ ಸಾಧನವನ್ನು ದೂರದಿಂದಲೇ ನಿಯಂತ್ರಿಸಬಹುದು. ಇದು ಅಮೆಜಾನ್‌ನ ಅಲೆಕ್ಸಾ ಮತ್ತು ಗೂಗಲ್ ಹೋಮ್‌ನೊಂದಿಗೆ ಸರಾಗವಾಗಿ ಕೆಲಸ ಮಾಡುತ್ತದೆ. ತಾಪಮಾನ ತಿಳಿಸಲು ಲೈಟಿಂಗ್‌ ವ್ಯವಸ್ಥೆ ಹೊಂದಿದ್ದು, ಸುರಕ್ಷತೆಗಾಗಿ ಚೈಲ್ಡ್ ಲಾಕ್ ಸೌಲಭ್ಯ ಇದೆ. ಇದು ತುಕ್ಕು ನಿರೋಧಕವಾಗಿದ್ದು, ಕೈಗೆಟುಕುವ ಬೆಲೆಗೆ ಲಭ್ಯವಿದೆ ಎಂದು ತಿಳಿಸಿದೆ.

ADVERTISEMENT

ಉತ್ಪನ್ನಕ್ಕೆ 3 ವರ್ಷ ವಾರಂಟಿ ಇದೆ. ನೀರು ಕಾಯಿಸುವ ಸಾಧನಕ್ಕೆ 4 ವರ್ಷ ವಾರಂಟಿ ಮತ್ತು ಒಳಗಿನ ಟ್ಯಾಂಕ್‌ಗೆ 10 ವರ್ಷಗಳ ವಾರಂಟಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.