ADVERTISEMENT

ಬೆಂಗಳೂರು: 1,400 ಕಾರು ವಿತರಿಸಿದ ಮಾರುತಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 15:41 IST
Last Updated 20 ಆಗಸ್ಟ್ 2021, 15:41 IST

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನ ಮಾರುತಿ ಸುಜುಕಿ ಕಂಪನಿಯು ರಾಜ್ಯದಲ್ಲಿ 1,400ಕ್ಕೂ ಹೆಚ್ಚಿನ ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರ ಮಾಡಿದೆ.

ಸಿಎನ್‌ಜಿ ಪಂಪ್‌ಗಳ ಜಾಲವು ರಾಜ್ಯದಲ್ಲಿ ವಿಸ್ತರಣೆ ಕಾಣುತ್ತಿರುವ ಕಾರಣ, ಮಾರುತಿ ಸುಜುಕಿ ಕಂಪನಿಯ ಸಿಎನ್‌ಜಿ ಮಾದರಿಯ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈಗ ರಾಜ್ಯದಲ್ಲಿ 50 ಸಿಎನ್‌ಜಿ ಪಂಪ್‌ಗಳು ಇವೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಇದು ಐದು ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ.

ಆಲ್ಟೊ, ಎಸ್‌ಪ್ರೆಸ್ಸೊ, ಸೆಲೆರಿಯೊ, ವ್ಯಾಗನ್‌ಆರ್‌, ಎರ್ಟಿಗಾ, ಇಕೊ, ಡಿಜೈರ್‌ ಟೂರ್ ಮತ್ತು ಸೂಪರ್ ಕ್ಯಾರಿ ಮಾದರಿಗಳಲ್ಲಿ ಸಿಎನ್‌ಜಿ ಆವೃತ್ತಿ ಕೂಡ ಲಭ್ಯ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.