ADVERTISEMENT

ವಿಇಸಿವಿ ತೆಕ್ಕೆಗೆ ವೋಲ್ವೊ ಬಸ್ ವಹಿವಾಟು

ಪಿಟಿಐ
Published 18 ಆಗಸ್ಟ್ 2020, 16:39 IST
Last Updated 18 ಆಗಸ್ಟ್ 2020, 16:39 IST

ನವದೆಹಲಿ: ಐಷರ್ ಮೋಟರ್ಸ್‌ನ ಅಂಗಸಂಸ್ಥೆ ‘ವಿಇಸಿವಿ’ಯು ವೋಲ್ವೊ ಸಮೂಹದ ಬಸ್ ವಹಿವಾಟುಗಳನ್ನು ₹ 100.5 ಕೋಟಿಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ.

ವೋಲ್ವೊ ಬಸ್‌ ಇಂಡಿಯಾದ (ವಿಬಿಐ) ವಹಿವಾಟುಗಳನ್ನು ವಿಇಸಿವಿ ಜೊತೆ ವಿಲೀನ ಮಾಡುವ ನಿರ್ಣಾಯಕ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಐಷರ್ ಮೋಟರ್ಸ್‌ ಈಚೆಗೆ ತಿಳಿಸಿದೆ.

ಇದರ ಪರಿಣಾಮವಾಗಿ, ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಇರುವ ಬಸ್ ತಯಾರಿಕಾ ಘಟಕ ಹಾಗೂ ಅದರಲ್ಲಿನ ನೌಕರರು ವಿಇಸಿವಿ ಅಧೀನಕ್ಕೆ ಒಳಪಡಲಿದ್ದಾರೆ. ಇದು ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.