ನವದೆಹಲಿ: ಉದ್ಯಮಿ ಅನಿಲ್ ಅಗರ್ವಾಲ್ ಒಡೆತನದ ಗಣಿಗಾರಿಕೆ ಕಂಪನಿ ವೇದಾಂತ ಲಿಮಿಟೆಡ್ 2024–25ರ ಆರ್ಥಿಕ ವರ್ಷದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ₹97 ಕೋಟಿ ದೇಣಿಗೆ ನೀಡಿದೆ.
2023–24ರಲ್ಲಿ ಕಂಪನಿಯು ಬಿಜೆಪಿಗೆ ₹26 ಕೋಟಿ ದೇಣಿಗೆ ನೀಡಿತ್ತು. ಇದಕ್ಕೆ ಹೋಲಿಸಿದರೆ ದೇಣಿಗೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ಕಂಪನಿಯ ವಾರ್ಷಿಕ ವರದಿ ತಿಳಿಸಿದೆ.
2024–25ರ ಆರ್ಥಿಕ ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ ನೀಡಿದ ಒಟ್ಟು ದೇಣಿಗೆ ₹157 ಕೋಟಿ. 2023–24ರಲ್ಲಿ ₹97 ಕೋಟಿ, 2022–23ರಲ್ಲಿ ₹155 ಕೋಟಿ ಮತ್ತು 2021–22ರಲ್ಲಿ ₹123 ಕೋಟಿ ದೇಣಿಗೆ ನೀಡಲಾಗಿತ್ತು ಎಂದು ತಿಳಿಸಿದೆ.
ಬಿಜು ಜನತಾದಳಕ್ಕೆ ₹25 ಕೋಟಿ, ಜಾರ್ಖಂಡ್ ಮುಕ್ತಿ ಮೋರ್ಚಾಗೆ ₹20 ಕೋಟಿ, ಕಾಂಗ್ರೆಸ್‌ಗೆ ₹10 ಕೋಟಿ ದೇಣಿಗೆ ನೀಡಿದೆ. ವೇದಾಂತ ಕಂಪನಿ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.