ADVERTISEMENT

ಸಸ್ಯಜನ್ಯ ತೈಲ ಆಮದು ಶೇ 13ರಷ್ಟು ಇಳಿಕೆ

ಪಿಟಿಐ
Published 13 ಮಾರ್ಚ್ 2024, 14:38 IST
Last Updated 13 ಮಾರ್ಚ್ 2024, 14:38 IST
.....
.....   

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಫೆಬ್ರುವರಿಯಲ್ಲಿ ಸಸ್ಯಜನ್ಯ ತೈಲ ಆಮದು ಪ್ರಮಾಣವು ಶೇ 13ರಷ್ಟು ಇಳಿಕೆಯಾಗಿದೆ. 

ಹಿಂದಿನ ವರ್ಷದ ಫೆಬ್ರುವರಿಯಲ್ಲಿ 11.14 ಲಕ್ಷ ಟನ್‌ ಆಮದಾಗಿತ್ತು. ಈ ಫೆಬ್ರುವರಿಯಲ್ಲಿ 9.75 ಲಕ್ಷ ಟನ್‌ಗೆ ಇಳಿಕೆಯಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ಬುಧವಾರ ತಿಳಿಸಿದೆ.

ಒಟ್ಟಾರೆ ಆಮದಿನಲ್ಲಿ ಖಾದ್ಯ ತೈಲವು 10.98 ಲಕ್ಷ ಟನ್‌ನಿಂದ 9.67 ಲಕ್ಷ ಟನ್‌ಗೆ ಇಳಿಕೆಯಾಗಿದೆ. ಖಾದ್ಯೇತರ ತೈಲ ಆಮದು 16,006 ಟನ್‌ನಿಂದ 7 ಸಾವಿರ ಟನ್‌ಗೆ ಕುಸಿತ ಕಂಡಿದೆ.

ADVERTISEMENT

2022–23ರ ತೈಲ ಮಾರುಕಟ್ಟೆ ವರ್ಷಕ್ಕೆ ಹೋಲಿಸಿದರೆ 2023–24ರ ಮಾರುಕಟ್ಟೆ ವರ್ಷದ ಮೊದಲ ನಾಲ್ಕು ತಿಂಗಳ (ನವೆಂಬರ್‌–ಫೆಬ್ರುವರಿ) ಅವಧಿಯಲ್ಲಿ ಒಟ್ಟು ಸಸ್ಯಜನ್ಯ ತೈಲ ಆಮದು ಪ್ರಮಾಣವು 58.87 ಲಕ್ಷ ಟನ್‌ನಿಂದ 46.47 ಲಕ್ಷ ಟನ್‌ಗೆ ಇಳಿದಿದೆ. ಒಟ್ಟಾರೆ ಶೇ 21ರಷ್ಟು ಕುಸಿತ ಕಂಡಿದೆ. 

ಖಾದ್ಯ ತೈಲ ಆಮದು 58.44 ಲಕ್ಷ ಟನ್‌ನಿಂದ 46.15 ಲಕ್ಷ ಟನ್‌ಗೆ ಇಳಿದಿದೆ. ಖಾದ್ಯೇತರ ತೈಲ ಆಮದು 43,135 ಟನ್‌ನಿಂದ 32,412 ಟನ್‌ಗೆ ಕುಸಿದಿದೆ ಎಂದು ಎಸ್‌ಇಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.