ADVERTISEMENT

ಉತ್ತಮ ಆಡಳಿತಕ್ಕೆ ಸಂದ ಜಯ: ಸೈರಸ್‌ ಮಿಸ್ತ್ರಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 19:40 IST
Last Updated 18 ಡಿಸೆಂಬರ್ 2019, 19:40 IST
ಸೈರಸ್‌ ಮಿಸ್ತ್ರಿ
ಸೈರಸ್‌ ಮಿಸ್ತ್ರಿ   

ನವದೆಹಲಿ:‘ಇದು ವೈಯಕ್ತಿಕ ಜಯ ಅಲ್ಲ.ಉತ್ತಮ ಆಡಳಿತ ಮತ್ತು ಕಡಿಮೆ ಷೇರು ಪಾಲು ಹೊಂದಿರುವವರ ಹಕ್ಕಿಗೆ ದೊರೆತಿರುವ ಜಯ’ ಎಂದು ಎನ್‌ಸಿಎಲ್‌ಎಟಿ ಆದೇಶದ ಕುರಿತು ಸೈರಸ್‌ ಮಿಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

‘ನಮ್ಮೆಲ್ಲರನ್ನೂ ಪೋಷಿಸುತ್ತಿರುವಟಾಟಾ ಸಮೂಹದ ಸುಸ್ಥಿರ ಬೆಳವಣಿಗೆಗಾಗಿ ಒಂದುಗೂಡಿ ಕೆಲಸ ಮಾಡೋಣ.ಟಾಟಾ ಸನ್ಸ್‌ನಲ್ಲಿ ಕಡಿಮೆ ಪ್ರಮಾಣದಲ್ಲಿ ಷೇರುಪಾಲು ಹೊಂದಿದ್ದರು ಸಹ 50ಕ್ಕೂ ಅಧಿಕ ವರ್ಷಗಳಿಂದ ಮಿಸ್ತ್ರಿ ಕುಟುಂಬವು ಸಂಸ್ಥೆಯನ್ನು ರಕ್ಷಿಸುವ ಜವಾಬ್ದಾರಿಯುತ ಪಾತ್ರ ನಿರ್ವಹಿಸುತ್ತಾ ಬಂದಿದೆ’ ಎಂದು ತಿಳಿಸಿದ್ದಾರೆ.

2016ರಲ್ಲಿ ಟಾಟಾ ಸನ್ಸ್‌ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿಗೊಳಿಸಿದ್ದನ್ನು ಪ್ರಶ್ನಿಸಿ, ಮಿಸ್ತ್ರಿಅವರು ಸಲ್ಲಿಸಿದ್ದ ಅಹವಾಲನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) 2018ರ ಜುಲೈನಲ್ಲಿ ತಳ್ಳಿ ಹಾಕಿತ್ತು.ಆ ಬಳಿಕ 2018ರ ಆಗಸ್ಟ್‌ನಲ್ಲಿ ಎನ್‌ಸಿಎಲ್‌ಎಟಿಗೆ ಮೇಲ್ಮನವಿ ಸಲ್ಲಿಸಿದ್ದರು.

ADVERTISEMENT

ಕಾನೂನು ಬಾಹಿರ: ಟಾಟಾ ಸಮೂಹದ ಪ್ರವರ್ತಕ ಸಂಸ್ಥೆಯಾಗಿರುವ ಟಾಟಾ ಸನ್ಸ್‌ ಅನ್ನು ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯಾಗಿ ಪರಿವರ್ತನೆ ಮಾಡುವುದು ಕಾನೂನು ಬಾಹಿರವಾಗಿದೆ ಎಂದು ಎನ್‌ಸಿಎಲ್‌ಎಟಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.