ADVERTISEMENT

ಬೆಂಗಳೂರು–ವಿಯೆಟ್ನಾಂ ನಡುವೆ ಹೊಸ ವಿಮಾನಯಾನ ಸೇವೆ ವಿಯೆಟ್‌ಜೆಟ್‌

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 10:54 IST
Last Updated 13 ಜುಲೈ 2022, 10:54 IST
ವಿಜೆಯಟ್‌ಜೆಟ್‌ ಏರ್‌ ವಿಮಾನ
ವಿಜೆಯಟ್‌ಜೆಟ್‌ ಏರ್‌ ವಿಮಾನ   

ಬೆಂಗಳೂರು: ವಿಯೆಟ್‌ಜೆಟ್‌ ಏರ್‌ ವಿಮಾನಯಾನ ಕಂಪನಿಯು ಭಾರತದಲ್ಲಿ ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸುತ್ತಿದ್ದು, ವಿಯೆಟ್ನಾಂನ ಪ್ರಮುಖ ನಗರಗಳಿಂದ ಬೆಂಗಳೂರಿಗೆ ಹೊಸ ಸೇವೆಗಳನ್ನು ಆರಂಭಿಸುವುದಾಗಿ ಬುಧವಾರ ತಿಳಿಸಿದೆ.

ವಿಯೆಟ್ನಾಂನ ವಾಣಿಜ್ಯ ಮತ್ತು ಪ್ರವಾಸಿ ನಗರಗಳಾದ ಹನೋಯ್‌, ಡಾ ನಾಗ್‌ ಮತ್ತು ಹೊ ಚಿ ಮಿನ್ಹ್‌ ಸಿಟಿಗೆ ಬೆಂಗಳೂರನ್ನು ಸಂಪರ್ಕಿಸುವ ಹೊಸ ವಿಮಾನ ಸೇವೆಗಳನ್ನು ಆರಂಭಿಸಲಾಗುವುದು. ಡಿಸೆಂಬರ್‌ ಒಳಗಾಗಿ ಹೊಸ ಮಾರ್ಗಗಳಲ್ಲಿ ಸೇವೆ ಆರಂಭವಾಗಲಿದೆ ಎಂದು ಕಂಪನಿಯ ವಾಣಿಜ್ಯ ವಿಭಾಗದ ನಿರ್ದೇಶಕ ಜಯ್‌ ಎಲ್. ಲಿಂಗೇಶ್ವರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವರ್ಷಾಂತ್ಯದ ಒಳಗೆ ಭಾರತದ ಇತರ ಪ್ರಮುಖ ನಗರಗಳಿಗೆ ನೇರ ವಿಮಾನ ಸೇವೆ ಆರಂಭಿಸುವ ಯೋಜನೆ ಹೊಂದಿರುವುದಾಗಿಯೂ ಅವರು ತಿಳಿಸಿದರು.

ADVERTISEMENT

ಕಂಪನಿಯು ನವದೆಹಲಿ, ಮುಂಬೈನಿಂದ ಹನೋಯ್‌ ಮತ್ತು ಹೊ ಚಿ ಮಿನ್‌ ಸಿಟಿಗೆ ನೇರ ವಿಮಾನ ಸೇವೆಯನ್ನುಈಚೆಗೆ ಆರಂಭಿಸಿದೆ. ಮುಂಬೈ ಮತ್ತು ದೆಹಲಿಯಿಂದ ಆಗ್ನೆಯ ಏಷ್ಯಾದ ನೆಚ್ಚಿನ ಬೀಚ್‌ ತಾಣವಾಗಿರುವ ಫು ಕ್ವೋಕ್‌ ದ್ವೀಪಗಳಿಗೆ ನೇರ ವಿಮಾನ ಸೇವೆಗಳನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.