ADVERTISEMENT

ವಿಸ್ತಾರಾ: ಹೊಸ ಒಪ್ಪಂದಕ್ಕೆ ಪೈಲಟ್‌ಗಳ ಸಹಿ

ಪಿಟಿಐ
Published 6 ಏಪ್ರಿಲ್ 2024, 15:51 IST
Last Updated 6 ಏಪ್ರಿಲ್ 2024, 15:51 IST
......
......   

ನವದೆಹಲಿ: ಪರಿಷ್ಕೃತ ವೇತನಕ್ಕೆ ಶೇ 98ರಷ್ಟು ಪೈಲಟ್‌ಗಳು ಸಹಿ ಹಾಕಿದ್ದಾರೆ. ಹಾಗಾಗಿ, ಈ ವಾರಾಂತ್ಯದೊಳಗೆ ವಿಸ್ತಾರಾ ಏರ್‌ಲೈನ್ಸ್‌ ಕಾರ್ಯಾಚರಣೆಯು ಸರಿಯಾದ ಹಳಿಗೆ ಮರಳಲಿದೆ ಎಂದು ಕಂಪನಿಯ ಸಿಇಒ ವಿನೋದ್ ಕಣ್ಣನ್ ಹೇಳಿದ್ದಾರೆ.

‘ಕಳೆದ ಮೂರು ದಿನಗಳ ಹಿಂದೆ ವ್ಯತ್ಯಯವಾಗಿದ್ದ ವಿಮಾನ ಸೇವೆಯು ಯಥಾಸ್ಥಿತಿಗೆ ಮರಳುತ್ತಿದೆ. ಕೆಲವು ಪೈಲಟ್‌ಗಳು ಹೊಸ ಒಪ್ಪಂದ ಕುರಿತು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಅವರ ಆತಂಕವನ್ನು ದೂರ ಸರಿಸುವ ಪ್ರಯತ್ನ ನಡೆದಿದೆ’ ಎಂದು ತಿಳಿಸಿದ್ದಾರೆ.

ವಿಸ್ತಾರಾ ಕಂಪನಿಯಲ್ಲಿ ಸುಮಾರು ಒಂದು ಸಾವಿರ ಪೈಲಟ್‌ಗಳಿದ್ದಾರೆ. ಪರಿಷ್ಕೃತ ವೇತನದ ಬಗ್ಗೆ ಕೆಲವು ಪೈಲಟ್‌ಗಳು ಆಕ್ಷೇಪ ವ್ಯಕ್ತಪಡಿಸಿ ಅನಾರೋಗ್ಯದ ರಜೆ ಮೇಲೆ ತೆರಳಿದ್ದರು. ಇದರಿಂದ 100ಕ್ಕೂ ವಿಮಾನಗಳ ಹಾರಾಟ ರದ್ದಾಗಿದ್ದರಿಂದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.