ADVERTISEMENT

ವಿಝಿಂಜಂ ಅಭಿವೃದ್ಧಿಗೆ ₹30 ಸಾವಿರ ಕೋಟಿ ಹೂಡಿಕೆ: ಕರಣ್ ಅದಾನಿ

ಪಿಟಿಐ
Published 24 ಜನವರಿ 2026, 16:29 IST
Last Updated 24 ಜನವರಿ 2026, 16:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ತಿರುವುನಂತಪುರಂ: ‘ವಿಝಿಂಜಂ ಬಂದರಿನ ಅಭಿವೃದ್ಧಿಗಾಗಿ ಒಟ್ಟು ₹30 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು’ ಎಂದು ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಜೋನ್‌ ಲಿಮಿಟೆಡ್‌ನ (ಎಪಿಎಸ್‌ಇಝಡ್‌) ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ ಹೇಳಿದ್ದಾರೆ.

ಇದು ಕೇರಳದಲ್ಲಿ ಆಗುತ್ತಿರುವ ಅತಿದೊಡ್ಡ ಹೂಡಿಕೆ. ವಿಝಿಂಜಂ ಬಂದರು ದೇಶದ ಅತಿದೊಡ್ಡ ಸರಕು ಸಾಗಣೆ ಬಂದರು ಆಗಲಿದೆ. ಜಾಗತಿಕವಾಗಿ ಸ್ಪರ್ಧಾತ್ಮಕವಾಗಲಿದೆ ಎಂದು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ವಿಝಿಂಜಂ ಬಂದರನ್ನು ಎಪಿಎಸ್‌ಇಝಡ್ ನಿರ್ವಹಣೆ ಮಾಡುತ್ತಿದೆ.

ಈ ಬಂದರು ದೊಡ್ಡದಾದ ಸರಕು ಸಾಗಣೆ ಬಂದರು ಮಾತ್ರವಲ್ಲದೆ, ದೇಶದಲ್ಲಿ ಸುಧಾರಿತ ತಂತ್ರಜ್ಞಾನ ಹೊಂದಿದ ಬಂದರು ಕೂಡ ಆಗಲಿದೆ. ಇದು ದೇಶದ ಬಂದರುಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಭವಿಷ್ಯದ ದಿಗ್ದರ್ಶಕ ಆಗಲಿದೆ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.