ADVERTISEMENT

4ಜಿ ಅಪ್‌ಗ್ರೇಡ್‌ ಆರಂಭ: ವೊಡಾಫೋನ್‌ ಐಡಿಯಾ

ಪಿಟಿಐ
Published 27 ಸೆಪ್ಟೆಂಬರ್ 2020, 14:03 IST
Last Updated 27 ಸೆಪ್ಟೆಂಬರ್ 2020, 14:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 3ಜಿ ಸೇವೆ ಬಳಸುತ್ತಿರುವ ಗ್ರಾಹಕರನ್ನು 4ಜಿಗೆ ಅಪ್‌ಗ್ರೇಡ್‌ ಮಾಡುವ ಕಾರ್ಯ ಆರಂಭಿಸಿರುವುದಾಗಿ ವೊಡಾಫೋನ್‌ ಐಡಿಯಾ ಕಂಪನಿ ಭಾನುವಾರ ತಿಳಿಸಿದೆ.

2ಜಿ ಸೇವೆಯನ್ನು ಬಳಸುತ್ತಿರುವ ಗ್ರಾಹಕರನ್ನೂ 4ಜಿಗೆ ಅಪ್‌ಗ್ರೇಡ್‌ ಮಾಡುವ ಸಾಮರ್ಥ್ಯ ಕಂಪನಿಗೆ ಇದ್ದರೂ ಸದ್ಯದ ಮಟ್ಟಿಗೆ 2ಜಿ ಗ್ರಾಹಕರಿಗೆ ಧ್ವನಿ ಸೇವೆಯನ್ನು ಮುಂದುವರಿಸುವುದಾಗಿ ತಿಳಿಸಿದೆ.

ಜೂನ್‌ ಅಂತ್ಯದ ವೇಳೆಗೆ ಕಂಪನಿಯ ಮೊಬೈಲ್ ಸೇವೆಗಳ‌ ಬಳಕೆದಾರರ ಸಂಖ್ಯೆ 30.5 ಕೋಟಿ ಇದ್ದು, ಅದರಲ್ಲಿ ಮೊಬೈಲ್‌ ಬ್ರಾಡ್‌ಬ್ಯಾಂಡ್‌ ಬಳಕೆದಾರರ ಸಂಖ್ಯೆ 11.6 ಕೋಟಿ ಇದೆ. ಇದರಲ್ಲಿ 10.4 ಕೋಟಿ 4ಜಿ ಹಾಗೂ 1.2 ಕೋಟಿ 3ಜಿ ಬಳಕೆದಾರರಿದ್ದಾರೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.