ನವದೆಹಲಿ: ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ಬಾಕಿಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ₹ 1 ಸಾವಿರ ಕೋಟಿಯನ್ನು ಸರ್ಕಾರಕ್ಕೆ ಪಾವತಿಸಲಾಗಿದೆ ಎಂದು ವೊಡಾಫೋನ್ ಐಡಿಯಾ ಶನಿವಾರ ಹೇಳಿದೆ.
ಈ ಹಿಂದೆ ಮೂರು ಕಂತುಗಳಲ್ಲಿ ₹ 6,854 ಕೋಟಿ ಪಾವತಿಸಿತ್ತು. ಇದರಿಂದ ಒಟ್ಟಾರೆ ₹ 7,854 ಕೋಟಿ ಪಾವತಿಸಿದಂತಾಗಿದೆ ಎಂದು ಷೇರುಪೇಟೆಗೆ ತಿಳಿಸಿದೆ. ದೂರಸಂಪರ್ಕ ಇಲಾಖೆಯ ಪ್ರಕಾರ, ವೊಡಾಫೋನ್ ಐಡಿಯಾ ಕಂಪನಿಯು ₹ 58 ಸಾವಿರ ಕೋಟಿ ಎಜಿಆರ್ ಬಾಕಿ ನೀಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.