ADVERTISEMENT

ಫೋಕ್ಸ್‌ವ್ಯಾಗನ್‌ – ಸ್ಕೋಡಾ ಇಂಡಿಯಾ ವಿಲೀನ

ಪಿಟಿಐ
Published 8 ಅಕ್ಟೋಬರ್ 2019, 17:28 IST
Last Updated 8 ಅಕ್ಟೋಬರ್ 2019, 17:28 IST
   

ನವದೆಹಲಿ: ಜರ್ಮನಿಯ ಫೋಕ್ಸ್‌ವ್ಯಾಗನ್‌ ಸಮೂಹವುಭಾರತದಲ್ಲಿ ತನ್ನ ಅಸ್ತಿತ್ವ ಬಲಪಡಿಸುವ ಉದ್ದೇಶದಿಂದ ಮೂರು ಕಂಪನಿಗಳನ್ನು ವಿಲೀನಗೊಳಿಸಲು ನಿರ್ಧರಿಸಿದೆ.

ಫೋಕ್ಸ್‌ವ್ಯಾಗನ್‌ ಇಂಡಿಯಾ, ಫೋಕ್ಸ್‌ವ್ಯಾಗನ್‌ ಗ್ರೂಪ್‌ ಸೇಲ್ಸ್‌ ಇಂಡಿಯಾ ಮತ್ತು ಸ್ಕೋಡಾ ಆಟೊ ಇಂಡಿಯಾ ಕಂಪನಿಗಳನ್ನು ವಿಲೀನಗೊಳಿಸಲು ಒಪ್ಪಿಗೆ ದೊರೆತಿದೆ.ವಿಲೀನದ ಬಳಿಕ ಸ್ಕೋಡಾ ಆಟೊ ಫೋಕ್ಸ್‌ವ್ಯಾಗನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಿದೆ.

ಭಾರತದ ಮಾರುಕಟ್ಟೆಗೆ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್‌ ವಾಹನಗಳನ್ನು ಅಭಿವೃದ್ಧಿಪಡಿಸಲು ರೂಪಿಸಿರುವ ‘ಇಂಡಿಯಾ 2.0’ ಯೋಜನೆಯ ಭಾಗವಾಗಿ ಈ ವಿಲೀನ ನಡೆದಿದೆ ಎಂದು ಸ್ಕೋಡಾ ಆಟೊದ ಸಿಇಒ ಬರ್ನಾರ್ಡ್‌ ಮೇರ್‌ ತಿಳಿಸಿದ್ದಾರೆ.

ADVERTISEMENT

2020ರಲ್ಲಿಭಾರತದ ಮಾರುಕಟ್ಟೆಗೆಮಧ್ಯಮ ಗಾತ್ರದ ಮೊದಲ ಎಸ್‌ಯುವಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ. 2025ರ ವೇಳೆಗೆ ಫೋಕ್ಸ್‌ವ್ಯಾಗನ್‌ ಮತ್ತು ಸ್ಕೋಡಾದ ಮಾರುಕಟ್ಟೆ ಷೇರು ಹೆಚ್ಚಿಸಿಕೊಳ್ಳವ ಉದ್ದೇಶದಿಂದ ಈ ವಿಲೀನವು ಉತ್ತಮ ಅವಕಾಶಗಳನ್ನು ತೆರೆದಿಟ್ಟಿದೆ.ತಂತ್ರಜ್ಞಾನ ಮತ್ತು ಆಡಳಿತ ಮಂಡಳಿ ಮಟ್ಟದಲ್ಲಿ ಇರುವ ಪರಿಣತರನ್ನು ಬಳಸಿಕೊಂಡು ಮಾರುಕಟ್ಟೆಯ ಸವಾಲು ಮತ್ತುಸ್ಪರ್ಧಾತ್ಮಕತೆಯನ್ನು ಎದುರಿಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.