ADVERTISEMENT

ಮುಂದಿನ ವರ್ಷ ಭಾರತಕ್ಕೆ ಫೋಕ್ಸ್‌ವ್ಯಾಗನ್ ಇ.ವಿ

ಪಿಟಿಐ
Published 18 ಏಪ್ರಿಲ್ 2023, 14:45 IST
Last Updated 18 ಏಪ್ರಿಲ್ 2023, 14:45 IST
   

ಕೊಚ್ಚಿ: ಫೋಕ್ಸ್‌ವ್ಯಾಗನ್ ಕಂಪನಿಯು ವಿದ್ಯುತ್ ಚಾಲಿತ ಕಾರನ್ನು ಭಾರತದ ಮಾರುಕಟ್ಟೆಗೆ ಮುಂದಿನ ವರ್ಷ ಬಿಡುಗಡೆ ಮಾಡಲಿದೆ. ತಾನು ತಯಾರಿಸುವ ಪ್ರೀಮಿಯಂ ವರ್ಗದ ಎಸ್‌ಯುವಿ ಐಡಿ.4 ಕಾರನ್ನು ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡಲಿದ್ದು, ದೇಶದಲ್ಲಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ.ವಿ. ಮಾರುಕಟ್ಟೆಯಲ್ಲಿ ಇರುವ ಅವಕಾಶಗಳನ್ನು ಬಳಸಿಕೊಳ್ಳುವ ಗುರಿ ಹೊಂದಿದೆ.

2030ರ ವೇಳೆಗೆ ಭಾರತದಲ್ಲಿ ತಾನು ನಡೆಸುವ ವಹಿವಾಟುಗಳಲ್ಲಿ ಶೇಕಡ 25ರಿಂದ ಶೇ 30ರಷ್ಟು ವಹಿವಾಟುಗಳು ಇ.ವಿ.ಗಳಿಂದ ಬರಲಿವೆ ಎಂಬ ಅಂದಾಜನ್ನು ಕಂಪನಿ ಹೊಂದಿದೆ. ‘ನಮ್ಮ ಕಾರ್ಯತಂತ್ರವು ಬಹಳ ಸ್ಪಷ್ಟವಾಗಿದೆ. ಮೊದಲನೆಯದು, ಪ್ರೀಮಿಯಂ ಕಾರುಗಳನ್ನು ಬಿಡುಗಡೆ ಮಾಡುವುದು. ಎರಡನೆಯದು, ವಿದ್ಯುತ್ ಚಾಲಿತ ವಾಹನಗಳನ್ನು ಮಾರುಕಟ್ಟೆಗೆ ತರುವುದು’ ಎಂದು ಕಂಪನಿಯ ಭಾರತದ ಬ್ರ್ಯಾಂಡ್ ನಿರ್ದೇಶಕ ಆಶಿಷ್ ಗುಪ್ತ ಹೇಳಿದ್ದಾರೆ. ಐಡಿ.4 ಕಾರಿನ ಬಿಡಿಭಾಗಗಳನ್ನು ಆಮದು ಮಾಡಿಕೊಂಡು, ಅವುಗಳನ್ನು ಭಾರತದಲ್ಲಿ ಜೋಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT