ADVERTISEMENT

ರಾಜ್ಯದ ಮಾರುಕಟ್ಟೆಗೆ ವೈವೈ ನೂಡಲ್ಸ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 20:05 IST
Last Updated 21 ಫೆಬ್ರುವರಿ 2020, 20:05 IST
   

ಬೆಂಗಳೂರು: ನೇಪಾಳದ ಬಹುರಾಷ್ಟ್ರೀಯ ಉದ್ದಿಮೆ ಸಮೂಹ ಸಿಜಿ ಕಾರ್ಪ್ ಗ್ಲೋಬಲ್‍ನ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‍ಎಂಸಿಜಿ) ತಯಾರಿಕಾ ಸಂಸ್ಥೆ ಸಿಜಿ ಫುಡ್ಸ್, ತನ್ನ ಜನಪ್ರಿಯ ಇನ್‌ಸ್ಟಂಟ್‌ ನೂಡಲ್ಸ್‌ ಬ್ರ್ಯಾಂಡ್‌ ವೈ ವೈ (WAI WAI) ಅನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.

‘ದೇಶಿ ಇನ್‌ಸ್ಟಂಟ್‌ ನೂಡಲ್ ಮಾರುಕಟ್ಟೆಯಲ್ಲಿ ದಕ್ಷಿಣ ಭಾರತವು ಶೇ 20ರಷ್ಟು ಮತ್ತು ಕರ್ನಾಟಕವು ಶೇ 5ರಷ್ಟು ಪಾಲು ಹೊಂದಿದೆ. ರಾಜ್ಯದಲ್ಲಿ ಇನ್‌ಸ್ಟಂಟ್‌ ನೂಡಲ್ಸ್‌ ಮಾರುಕಟ್ಟೆಯನ್ನು ಗಮನಾರ್ಹವಾಗಿ ವಿಸ್ತರಿಸಲು ಕಂಪನಿ ನಿರ್ಧರಿಸಿದೆ’ ಎಂದು ಕಂಪನಿಯ ದಕ್ಷಿಣ ವಲಯದ ಮಾರಾಟ ಮುಖ್ಯಸ್ಥ ಪರ್ವೇಜ್ ಆರ್. ವ್ಯಾನ್ರೆವಾಲಾ ಹೇಳಿದ್ದಾರೆ.

‘ಕರ್ನಾಟಕದ ಗ್ರಾಹಕರ ಅಭಿರುಚಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಕಂಪನಿಯು ಶೀಘ್ರದಲ್ಲೇ ಪರಿಚಯಿಸಲಿರುವ ಹೊಸ ಉತ್ಪನ್ನಗಳು ಖಂಡಿತವಾಗಿಯೂ ಅವರಿಗೆ ಇಷ್ಟವಾಗುತ್ತವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.