ADVERTISEMENT

ವಾಟ್ಸ್‌ಆ್ಯಪ್‌ ಇಂಡಿಯಾ: ಸಿಇಒ ಆಗಿ ಅಭಿಜಿತ್‌ ಬೋಸ್‌ ನೇಮಕ

ಏಜೆನ್ಸೀಸ್
Published 21 ನವೆಂಬರ್ 2018, 15:15 IST
Last Updated 21 ನವೆಂಬರ್ 2018, 15:15 IST
   

ನವದೆಹಲಿ: ಸಂದೇಶ ವಿನಿಮಯಕ್ಕಿರುವ ಜನಪ್ರಿಯ ವೇದಿಕೆ ವಾಟ್ಸ್‌ಆ್ಯಪ್‌, ಅಭಿಜಿತ್‌ ಬೋಸ್‌ ಅವರನ್ನು ವಾಟ್ಸ್‌ಆ್ಯಪ್‌ ಇಂಡಿಯಾಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಿದೆ. ಕ್ಯಾಲಿಫೋರ್ನಿಯಾದಿಂದ ಹೊರಗೂ ತನ್ನ ಆಡಳಿತ ಮಂಡಳಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು,ಭಾರತದಲ್ಲಿ ಸಂಸ್ಥೆಯ ತಂಡವನ್ನು ಬೋಸ್‌ ಮುನ್ನಡೆಸಲಿದ್ದಾರೆ.

ಗುರುಗ್ರಾಮದಲ್ಲಿ ವಾಟ್ಸ್‌ಆ್ಯಪ್‌ ಇಂಡಿಯಾ ಕಾರ್ಯಾರಂಭ ಮಾಡಲಿದೆ. ಬೋಸ್‌ ಅವರು 2019ರ ಅಧಿಕಾರ ವಹಿಸಲಿದ್ದಾರೆ ಎಂದು ಕಂಪೆನಿಯು ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಸಣ್ಣ ಮತ್ತು ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಬಲಪಡಿಸುವುದು ಹಾಗೂ ಗ್ರಾಹಕರೊಂದಿಗೆ ನಿಕಟ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಬೋಸ್‌ ಮತ್ತು ತಂಡ ಸಹಕಾರ ನೀಡಲಿದೆ.ಗ್ರಾಹಕರೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಳ್ಳುವ ಸಲುವಾಗಿ ಈ ವರ್ಷದ ಆರಂಭದಲ್ಲಿ ವಾಟ್ಸ್‌ಆ್ಯಪ್‌ ಬ್ಯುಸಿನೆಸ್‌ ಆ್ಯಪ್‌ ಬಿಡುಗಡೆ ಮಾಡಿತ್ತು.

ADVERTISEMENT

‘ಭಾರತದಲ್ಲಿವಾಟ್ಸ್‌ಆ್ಯಪ್‌ ಬ್ಯುಸಿನೆಸ್‌ ಆ್ಯಪ್‌ಗೆ ಹತ್ತುಲಕ್ಷ ಬಳಕೆದಾರರಿದ್ದಾರೆ.ವ್ಯವಹಾರವನ್ನು ವೃದ್ಧಿಸುತ್ತಾ ಜನರನ್ನು ಬೆಸೆಯುವುದರ ಜೊತೆಗೆ, ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿರುವ ಭಾರತದ ಡಿಜಿಟಲ್‌ ಆರ್ಥಿಕತೆಗೆ ನೆರವಾಗಲು ಬಯಸುತ್ತೇವೆ. ಆ ನಿಟ್ಟಿನಲ್ಲಿ ಅಭಿಜಿತ್‌ ಕಾರ್ಯನಿರ್ವಹಿಸಲಿದ್ದು, ಭಾರತದಾದ್ಯಂತ ನಮ್ಮ ಉದ್ಯಮ ವಿಸ್ತರಿಸಲಿದ್ದಾರೆ’ ಎಂದು ವಾಟ್ಸ್‌ಆ್ಯಪ್‌ ಕಾರ್ಯಾಚರಣೆ ಮುಖ್ಯಾಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.