ADVERTISEMENT

OpenAI: ಹಂಗಾಮಿ ಸಿಇಒ ಆಗಿ ಮೀರಾ ಮುರಾಟಿ ನೇಮಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2023, 7:27 IST
Last Updated 18 ನವೆಂಬರ್ 2023, 7:27 IST
<div class="paragraphs"><p>ಮೀರಾ ಮುರಾಟಿ </p></div>

ಮೀರಾ ಮುರಾಟಿ

   

ವಾಷಿಂಗ್ಟನ್: ಎಐ(AI) ಆಧಾರಿತ ಓಪನ್‌ಎಐ(OpenAI) ಕಂಪನಿಯು ಚಾಟ್‌ಜಿಪಿಟಿ (ChatGPT) ಸೃಷ್ಟಿಕರ್ತ ಹಾಗೂ ಸಿಇಒ ಸ್ಯಾಮ್ ಆಲ್ಟ್‌ಮನ್‌ ಅವರನ್ನು ವಜಾಗೊಳಿಸಿರುವ ಬೆನ್ನಲೇ ಹಂಗಾಮಿ ಸಿಇಒ ಅವರನ್ನು ನೇಮಕ ಮಾಡಿದೆ.

ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೀರಾ ಮುರಾಟಿ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಆಲ್ಟ್‌ಮನ್‌ ಅವರನ್ನು ವಜಾಗೊಳಿಸಿರುವುದು ಟೆಕ್ ವಲಯಗಳಲ್ಲಿ ಸಂಚಲನ ಮೂಡಿಸಿದೆ. ನಿನ್ನೆ ನಡೆದ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಮುರಾಟಿ ಅಲ್ಬೇನಿಯಾದವರು. ವಿದ್ಯಾಬ್ಯಾಸವನ್ನು ಕೆನಡಾದಲ್ಲಿ ಪೂರೈಸಿದ್ದಾರೆ. ಇವರು ಎಂಜಿನಿಯರಿಂಗ್‌ ಪದವೀಧರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.