ADVERTISEMENT

ವಿಮಾನಗಳಲ್ಲಿ ವೈಫೈ ಸೇವೆಗೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 17:15 IST
Last Updated 2 ಮಾರ್ಚ್ 2020, 17:15 IST
ವೈಫೈ
ವೈಫೈ   

ನವದೆಹಲಿ: ದೇಶಿ ವಿಮಾನ ಪ್ರಯಾಣಿಕರಿಗೆ ಸದ್ಯದಲ್ಲಿಯೇ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸೇವೆ ಲಭ್ಯವಾಗಲಿದೆ.

ವಿಮಾನ ಯಾನ ಸಂದರ್ಭದಲ್ಲಿ ಪ್ರಯಾಣಿಕರು ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್ಸ್‌, ಸ್ಮಾರ್ಟ್‌ವಾಚ್‌, ಇ–ರೀಡರ್ಸ್‌ ಬಳಕೆಗೆ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಬಳಸುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಏರ್‌ಪ್ಲೇನ್‌ ಮೋಡ್‌ನಲ್ಲಿ ಡೇಟಾ ಸೌಲಭ್ಯ ಮಾತ್ರ ಬಳಸಬಹುದಾಗಿದೆ. ಕರೆ ಮಾಡಲು ಈ ಸೌಲಭ್ಯ ಲಭ್ಯ ಇರುವುದಿಲ್ಲ.

ಏರ್‌ ವಿಸ್ತಾರಾ ತನ್ನ ಡ್ರೀಮ್‌ಲೈನರ್‌ 787–9 ವಿಮಾನದಲ್ಲಿ ಸೋಮವಾರದಿಂದಲೇ ಈ ಸೇವೆಗೆ ಚಾಲನೆ ನೀಡಿದೆ. ಈ ಸೇವೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಡೇಟಾ ಪ್ಯಾಕೇಜ್‌ ಬಗ್ಗೆ ಕಂಪನಿಯು ವಿವರ ನೀಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.