ADVERTISEMENT

ಠೇವಣಿ ಇರಿಸಲು ಫೋಕ್ಸ್‌ವ್ಯಾಗನ್‌ ಎನ್‌ಜಿಟಿ ತಾಕೀತು

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 18:48 IST
Last Updated 17 ಜನವರಿ 2019, 18:48 IST

ನವದೆಹಲಿ: ಭಾರತದಲ್ಲಿನ ಮಾಲಿನ್ಯ ನಿಯಂತ್ರಣದ ಮಾನದಂಡಗಳನ್ನು ಪಾಲಿಸುವುದಕ್ಕೆ ಬದ್ಧವಾಗಿರುವುದಾಗಿ ಜರ್ಮನಿಯ ಕಾರ್ ತಯಾರಿಕಾ ಸಂಸ್ಥೆ ಫೋಕ್ಸ್‌ವ್ಯಾಗನ್‌, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ವಾಗ್ದಾನ ನೀಡಿದೆ.

‘ಎನ್‌ಜಿಟಿ’ಯ ನಿರ್ದೇಶನದಂತೆ ಕಾಲಮಿತಿ ಒಳಗೆ ₹ 100 ಕೋಟಿ ಠೇವಣಿ ಇರಿಸುವುದಾಗಿಯೂ ತಿಳಿಸಿದೆ. ಠೇವಣಿ ಇರಿಸದಿದ್ದರೆ ಸಂಸ್ಥೆಯ ನಿರ್ದೇಕರನ್ನು ಜೈಲಿಗೆ ಹಾಕುವುದಾಗಿ ಮಂಡಳಿ ತಾಕೀತು ಮಾಡಿತ್ತು.

ಶುಕ್ರವಾರ ಸಂಜೆ 5ಗಂಟೆ ಒಳಗೆ ಠೇವಣಿ ಇರಿಸಲು ಮಂಡಳಿಯು ಆಟೊಮೊಬೈಲ್‌ ದೈತ್ಯ ಸಂಸ್ಥೆಗೆ ಸೂಚನೆ ನೀಡಿತ್ತು. ಡೀಸೆಲ್‌ ವಾಹನದ ಹೊಗೆ ಹೊರಸೂಸುವ ಪ್ರಮಾಣದ ಬಗ್ಗೆ ತಪ್ಪು ಮಾಹಿತಿ ನೀಡುವ ದೋಷಪೂರಿತ ಸಾಧನ (ಸಾಫ್ಟ್‌ವೇರ್‌) ಅಳವಡಿಸಿ ಮಾಲಿನ್ಯ ತಪಾಸಣೆಯಲ್ಲಿ ವಂಚನೆ ಎಸಗಿದ ಆರೋಪವನ್ನು ಸಂಸ್ಥೆ ಎದುರಿಸುತ್ತಿದೆ. ಈ ಕಾರಣಕ್ಕೆ ಸಂಸ್ಥೆಯ ವಾಹನಗಳ ಮಾರಾಟ ನಿಷೇಧಿಸಲು ಕೋರಿ ಕೆಲವರು ‘ಎನ್‌ಜಿಟಿ’ಗೆ ದೂರು ಸಲ್ಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.