ADVERTISEMENT

ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆ ಇಳಿಕೆ

ಪಿಟಿಐ
Published 16 ನವೆಂಬರ್ 2023, 13:28 IST
Last Updated 16 ನವೆಂಬರ್ 2023, 13:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಗುರುವಾರದಿಂದ ಜಾರಿಗೆ ಬರುವಂತೆ ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆ ತಗ್ಗಿಸಿದೆ. ಇದೇ ವೇಳೆ, ಡೀಸೆಲ್‌ ಮೇಲಿನ ತೆರಿಗೆಯನ್ನು ಸಹ ಇಳಿಕೆ ಮಾಡಿದೆ.

ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯು ಪ್ರತಿ ಟನ್‌ಗೆ ₹9,050 ಇದ್ದಿದ್ದು ₹6,300ಕ್ಕೆ ಇಳಿಕೆ ಆಗಿದೆ. 

ಡೀಸೆಲ್ ರಫ್ತು ಮೇಲಿನ ತೆರಿಗೆಯನ್ನು ಪ್ರತಿ ಲೀಟರಿಗೆ ₹2 ರಿಂದ ₹1ಕ್ಕೆ ಇಳಿಕೆ ಮಾಡಲಾಗಿದೆ. ವಿಮಾನ ಇಂಧನ (ಎಟಿಎಫ್‌) ಮತ್ತು ಪೆಟ್ರೋಲ್‌ ಮೇಲಿನ ಶೂನ್ಯ ತೆರಿಗೆಯನ್ನು ಮುಂದುವರಿಸಲಾಗಿದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಆಗಿರುವುದರಿಂದ ಈ ಬದಲಾವಣೆ ಮಾಡಿರುವುದಾಗಿ ಸರ್ಕಾರ ತಿಳಿಸಿದೆ. ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ದರವು ಅಕ್ಟೋಬರ್‌ನಲ್ಲಿ ಬ್ಯಾರಲ್‌ಗೆ 90.08 ಡಾಲರ್‌ನಷ್ಟು ಇದ್ದಿದ್ದು ನವೆಂಬರ್‌ನಲ್ಲಿ 84.78 ಡಾಲರ್‌ಗೆ ಇಳಿಕೆ ಆಗಿದೆ. 2022ರ ಜುಲೈ 1ರಿಂದ ಆಕಸ್ಮಿಕ ಲಾಭ ತೆರಿಗೆ ವಿಧಿಸುವುದನ್ನು ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.