ADVERTISEMENT

ವಿಪ್ರೊ ಕಂಪನಿಯ ನೂತನ ಸಿಇಒ ಥಿಯೆರ‍್ರಿ ಡೆಲಾಪೋರ್ಟ್

ಪಿಟಿಐ
Published 29 ಮೇ 2020, 11:44 IST
Last Updated 29 ಮೇ 2020, 11:44 IST
ಥಿಯೆರ‍್ರಿ ಡೆಲಾಪೋರ್ಟ್‌
ಥಿಯೆರ‍್ರಿ ಡೆಲಾಪೋರ್ಟ್‌    

ನವದೆಹಲಿ: ದೇಶದ ಮೂರನೇ ಸಾಫ್ಟ್‌ವೇರ್‌ ಸೇವಾ ರಫ್ತು ಸಂಸ್ಥೆಯಾಗಿರುವ ವಿಪ್ರೊ, ಕ್ಯಾಪಜೆಮಿನಿಯ ಸಿಒಒ ಥಿಯೆರ‍್ರಿ ಡೆಲಾಪೋರ್ಟ್‌ ಅವರನ್ನು ತನ್ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.

ಕ್ಯಾಪಜೆಮಿನಿಯಲ್ಲಿ 25 ವರ್ಷಗಳಿಂದ ಸೇವೆಯಲ್ಲಿದ್ದ ಡೆಲಾಪೋರ್ಟ್‌ ಅವರು ಜುಲೈ 6ರಂದು ವಿಪ್ರೊದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಕಂಪನಿಯ ಸಿಇಒ ಅಬಿದಲಿ ನೀಮೂಚವಾಲಾ ಅವರು ಸಿಇಒ ಹುದ್ದೆ ತೊರೆಯಲು ಜನವರಿಯಲ್ಲಿ ನಿರ್ಧರಿಸಿದ್ದರು. ಜೂನ್‌ 1ರಂದು ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. ಕಂಪನಿಯ ಅಧ್ಯಕ್ಷರಾಗಿರುವ ರಿಷದ್‌ ಪ್ರೇಮ್‌ಜಿ ಅವರು ಜುಲೈ 5ರವರೆಗೆ ಕಂಪನಿಯ ದಿನನಿತ್ಯದ ವಹಿವಾಟುಗಳನ್ನು ನೋಡಿಕೊಳ್ಳಲಿದ್ದಾರೆ.

ADVERTISEMENT

ಸ್ವತಂತ್ರ ನಿರ್ದೇಶಕ ನೇಮಕ: ಹಣಕಾಸು ಸೇವೆ ವೃತ್ತಿಯಲ್ಲಿ ಇರುವ ದೀಪಕ್‌ ಎಂ. ಸತ್ವಾಲೇಕರ್‌ ಅವರನ್ನು ಕಂಪನಿಯು ನಿರ್ದೇಶಕ ಮಂಡಳಿಯ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಿದೆ. ಇವರ ಅಧಿಕಾರಾವಧಿಯು 5 ವರ್ಷಗಳವರೆಗೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.