ADVERTISEMENT

ವಂಡರ್‌ಲಾ ವರಮಾನ ₹112.6 ಕೋಟಿ

​ಪ್ರಜಾವಾಣಿ ವಾರ್ತೆ
Published 28 ಮೇ 2023, 14:49 IST
Last Updated 28 ಮೇ 2023, 14:49 IST
ವಂಡರ್‌ಲಾ
ವಂಡರ್‌ಲಾ   

ಬೆಂಗಳೂರು: ವಂಡರ್‌ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌, 2022–23ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹112.6 ಕೋಟಿ ವರಮಾನ ಗಳಿಸಿದೆ.

ಕೋವಿಡ್‌ ಸಾಂಕ್ರಾಮಿಕದ ನಂತರ ವರಮಾನ ಹೆಚ್ಚಾಗುತ್ತಿದೆ. 2020ರಲ್ಲಿ ₹44.91 ಕೋಟಿ ಇದ್ದ ವರಮಾನ ಈ ಬಾರಿ ₹112.6 ಕೋಟಿಗೆ ತಲುಪಿದ್ದು, ಮೂರುಪಟ್ಟು ಏರಿಕೆ ಆಗಿದೆ ಎಂದು ವಂಡರ್‌ಲಾದ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ ಚಿಟ್ಟಿಲಪ್ಪಿಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಂಡರ್‌ಲಾ ಪಾರ್ಕ್‌ಗೆ ಭೇಟಿ ನೀಡಿದವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಬೆಂಗಳೂರು ಪಾರ್ಕ್‌ಗೆ 2.69 ಲಕ್ಷ ಜನರು ನಾಲ್ಕನೇ ತ್ರೈಮಾಸಿಕದಲ್ಲಿ ಭೇಟಿ ನೀಡಿದ್ದಾರೆ. ಕೊಚ್ಚಿ ಪಾರ್ಕ್‌ಗೆ 3.03 ಲಕ್ಷ ಹಾಗೂ ಹೈದರಾಬಾದ್‌ ಪಾರ್ಕ್‌ಗೆ 2.33 ಲಕ್ಷ ಜನರು ಭೇಟಿ ನೀಡಿದ್ದಾರೆ ಎಂದು ವಿವರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.