ADVERTISEMENT

ಸಗಟು ಹಣದುಬ್ಬರ 2 ವರ್ಷಗಳ ಕನಿಷ್ಠ

ಪಿಟಿಐ
Published 17 ಜೂನ್ 2019, 16:27 IST
Last Updated 17 ಜೂನ್ 2019, 16:27 IST

ನವದೆಹಲಿ: ಸಗಟು ಬೆಲೆ ಆಧರಿಸಿದ ಹಣದುಬ್ಬರವು ಮೇ ತಿಂಗಳಲ್ಲಿ 22 ತಿಂಗಳ ಕನಿಷ್ಠ ಮಟ್ಟವಾದ ಶೇ 2.45ಕ್ಕೆ ಕುಸಿದಿದೆ.

2017ರ ಜುಲೈನಲ್ಲಿ ಇದು ಶೇ 1.88ರಷ್ಟಿತ್ತು. ಆಹಾರ ಪದಾರ್ಥ, ಇಂಧನ ಮತ್ತು ವಿದ್ಯುತ್‌ ಬೆಲೆ ಕುಸಿತದಿಂದ ಹಣದುಬ್ಬರ ಕಡಿಮೆಯಾಗಿದೆ. ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಏಪ್ರಿಲ್‌ನಲ್ಲಿ ಶೇ 3.07ರಷ್ಟಿತ್ತು. 2018ರ ಮೇನಲ್ಲಿ ಶೇ 4.78 ರಷ್ಟು ದಾಖಲಾಗಿತ್ತು.

ಏಪ್ರಿಲ್‌ನಲ್ಲಿ ಶೇ 7.37ರಷ್ಟಿದ್ದ ಆಹಾರ ಪದಾರ್ಥಗಳ ಹಣದುಬ್ಬರವು ಮೇನಲ್ಲಿ ಶೇ 6.99ಕ್ಕೆ ಇಳಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.