ADVERTISEMENT

ಸಗಟು ಹಣದುಬ್ಬರ 5 ತಿಂಗಳ ಗರಿಷ್ಠ ಮಟ್ಟಕ್ಕೆ

ಪಿಟಿಐ
Published 14 ಸೆಪ್ಟೆಂಬರ್ 2020, 13:43 IST
Last Updated 14 ಸೆಪ್ಟೆಂಬರ್ 2020, 13:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ತಯಾರಿಕಾ ವಸ್ತುಗಳು ತುಟ್ಟಿಯಾಗಿರುವ ಕಾರಣ ಸಗಟು ದರ ಹಣದುಬ್ಬರ ಪ್ರಮಾಣವು ಆಗಸ್ಟ್‌ನಲ್ಲಿ ಐದು ತಿಂಗಳ ಗರಿಷ್ಠ ಮಟ್ಟವಾದ ಶೇಕಡ 0.16ಕ್ಕೆ ಏರಿಕೆಯಾಗಿದೆ.

ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವುಮಾರ್ಚ್‌ನಲ್ಲಿ ಶೇ 0.42ರಷ್ಟಿತ್ತು. ಆ ಬಳಿಕ ಏಪ್ರಿಲ್‌ನಿಂದ ಜುಲೈವರೆಗಿನ ನಾಲ್ಕು ತಿಂಗಳುಗಳಲ್ಲಿ ನಕಾರಾತ್ಮಕ ಮಟ್ಟದಲ್ಲಿಯೇ ಇತ್ತು.

2019ರ ಆಗಸ್ಟ್‌ನಲ್ಲಿ ಶೇ 1.17ರಷ್ಟಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. ಆಹಾರ ಉತ್ಪನ್ನಗಳ ಹಣದುಬ್ಬರ ಶೇ 3.84ರಷ್ಟು, ತರಕಾರಿ ಮತ್ತು ಬೇಳೆಕಾಳುಗಳ ಹಣದುಬ್ಬರ ಕ್ರಮವಾಗಿ ಶೇ 7.03ರಷ್ಟು ಮತ್ತು ಶೇ 9.86ರಷ್ಟುಇದೆ. ಮೊಟ್ಟೆ, ಮಾಂಸ ಮತ್ತು ಮೀನಿನ ಹಣದುಬ್ಬರ ಶೇ 6.23ರಷ್ಟಿದೆ.

ADVERTISEMENT

ಆಲೂಗಡ್ಡೆ ದರ ಶೇ 82.93ರಷ್ಟು ಹೆಚ್ಚಾಗಿದೆ. ಈರುಳ್ಳಿ ದರ ಶೇ (–) 34.48ರಷ್ಟಾಗಿದೆ.

ಇಂಧನ ಮತ್ತು ವಿದ್ಯುತ್‌ ಹಣದುಬ್ಬರ ಜುಲೈನಲ್ಲಿ ಶೇ 9.84ರಷ್ಟು ಇದ್ದಿದ್ದು ಆಗಸ್ಟ್‌ನಲ್ಲಿ ಶೇ 9.68ಕ್ಕೆ ಇಳಿದಿದೆ. ತಯಾರಿಕಾ ಉತ್ಪನ್ನಗಳ ಹಣದುಬ್ಬರ ಜುಲೈನಲ್ಲಿ ಶೇ 0.51ರಷ್ಟಿತ್ತು. ಆಗಸ್ಟ್‌ನಲ್ಲಿ ಶೇ 1.27ಕ್ಕೆ ಏರಿಕೆಯಾಗಿದೆ.

ಅಂಕಿ–ಅಂಶ

ಸಗಟು ಹಣದುಬ್ಬರ

ಏಪ್ರಿಲ್‌;–1.57%

ಮೇ;–3.37%

ಜೂನ್‌;–1.81%

ಜುಲೈ;–0.58%

ಆಗಸ್ಟ್‌;0.16%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.