ADVERTISEMENT

Yes Bank Crisis| 7 ವರ್ಷದಲ್ಲೇ ಅತಿಹೆಚ್ಚು ಕುಸಿತ ಕಂಡ ಎಸ್‌ಬಿಐ ಷೇರು ಮಾರಾಟ

ಏಜೆನ್ಸೀಸ್
Published 6 ಮಾರ್ಚ್ 2020, 7:14 IST
Last Updated 6 ಮಾರ್ಚ್ 2020, 7:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ:ಭಾರತೀಯಸ್ಟೇಟ್ ಬ್ಯಾಂಕ್(ಎಸ್‌ಬಿಐ) ಷೇರು ಮಾರಾಟಶುಕ್ರವಾರ ಶೇ.7 ರಷ್ಟು ಕುಸಿದಿವೆ. ಆ ಮೂಲಕ ಸರ್ಕಾರಿ ಒಡೆತನದ ಎಸ್‌ಬಿಐ ಷೇರು ಮಾರಾಟದಲ್ಲಿ ಕಳೆದ ಏಳು ವರ್ಷಗಳಲ್ಲಿ ಅತಿಹೆಚ್ಚು ಇಳಿಕೆ ಕಂಡಂತಾಗಿದೆ.

ಯೆಸ್‌ ಬ್ಯಾಂಕ್ ಪುನರುಜ್ಜೀವನದ ಹೊಣೆಯನ್ನು ಆರ್‌ಬಿಐ ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ನೇತೃತ್ವದ ಬ್ಯಾಂಕರ್‌ಗಳ ಒಕ್ಕೂಟಕ್ಕೆವಹಿಸಿಕೊಟ್ಟಿತ್ತು. ಆ ಕಾರಣ, ಯೆಸ್ ಬ್ಯಾಂಕ್ ಷೇರುಗಳನ್ನು ಎಸ್‌ಬಿಐ ಖರೀದಿಸುತ್ತಿದೆ ಎಂಬ ವದಂತಿಗಳು ಹರಡಿ, ಎಸ್‌ಬಿಐ ಷೇರುಗಳ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ.

ಈ ಬಗ್ಗೆ ಗುರುವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಬಿಐ, ‘ಯೆಸ್‌ ಬ್ಯಾಂಕ್‌ನ ಷೇರುಗಳನ್ನು ಖರೀದಿಸುವ ಯಾವುದೇ ಮಾತುಕತೆಗಳು ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವುದರ ಪರಿಣಾಮ ಆರ್‌ಬಿಐನಿಂದ ನಿಷೇಧಕ್ಕೆ ಒಳಗಾದ ಯೆಸ್‌ ಬ್ಯಾಂಕ್‌ ಷೇರುಗಳು ಇಂದಿನ ವಹಿವಾಟಿನಲ್ಲಿ ಶೇ.85ರಷ್ಟು ಕುಸಿತ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.