ಮುಂಬೈ: ಯೆಸ್ ಬ್ಯಾಂಕ್‌ನ ಶೇಕಡ 24.99ರಷ್ಟು ಷೇರುಗಳನ್ನು ಖರೀದಿಸಲು ಜಪಾನ್‌ನ ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್ ಕಾರ್ಪೊರೇಷನ್‌ಗೆ (ಎಸ್‌ಎಂಬಿಸಿ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅನುಮತಿ ನೀಡಿದೆ.
ಆದರೆ ಷೇರು ಖರೀದಿ ನಂತರ, ಎಸ್‌ಎಂಬಿಸಿಯನ್ನು ಯೆಸ್ ಬ್ಯಾಂಕ್‌ನ ಪ್ರವರ್ತಕ ಎಂಬುದಾಗಿ ಪರಿಗಣಿಸಬಾರದು ಎಂದು ಆರ್‌ಬಿಐ ಹೇಳಿದೆ. ಈ ಸಂಗತಿಯನ್ನು ಯೆಸ್ ಬ್ಯಾಂಕ್ ಷೇರುಪೇಟೆಗೆ ಶನಿವಾರ ತಿಳಿಸಿದೆ.
ಎಸ್‌ಎಂಬಿಸಿಯು ₹13,968 ಕೋಟಿಗೆ ಯೆಸ್ ಬ್ಯಾಂಕ್‌ನ ಶೇ 20ರಷ್ಟು ಷೇರುಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ ಎಂದು ಬ್ಯಾಂಕ್ ಮೇ ತಿಂಗಳಿನಲ್ಲಿ ಷೇರುಪೇಟೆಗೆ ತಿಳಿಸಿತ್ತು. ಇದು ದೇಶದ ಹಣಕಾಸು ವಲಯದಲ್ಲಿನ ಅತಿದೊಡ್ಡ ಮೊತ್ತದ ಗಡಿಯಾಚೆಗಿನ ವಿಲೀನ ಮತ್ತು ಸ್ವಾಧೀನ ಒಪ್ಪಂದವಾಗಿದೆ. ಇದೀಗ ಹೆಚ್ಚುವರಿಯಾಗಿ ಶೇ 4.9ರಷ್ಟು ಷೇರನ್ನು ಖರೀದಿಸಲು ಒಪ್ಪಿಗೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.