ADVERTISEMENT

ಜೊಮಾಟೊ: ₹23 ಕೋಟಿ ಜಿಎಸ್‌ಟಿ ಪಾವತಿಗೆ ನೋಟಿಸ್‌

ಪಿಟಿಐ
Published 31 ಮಾರ್ಚ್ 2024, 14:14 IST
Last Updated 31 ಮಾರ್ಚ್ 2024, 14:14 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಜಿಎಸ್‌ಟಿ, ಬಡ್ಡಿ ಹಾಗೂ ದಂಡ ಸೇರಿ ಒಟ್ಟು ₹23.26 ಕೋಟಿ ಪಾವತಿಸುವಂತೆ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯು, ಆನ್‌ಲೈನ್‌ ಆಹಾರ ವಿತರಣಾ ಸಂಸ್ಥೆಯಾದ ಜೊಮಾಟೊ ಕಂಪನಿಗೆ ನೋಟಿಸ್‌ ನೀಡಿದೆ.

ಇಲಾಖೆಯ ಸಹಾಯಕ ಆಯುಕ್ತರು ಹಣ ಪಾವತಿ ಸಂಬಂಧ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಕ್ಷಮ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಜೊಮಾಟೊ ತಿಳಿಸಿದೆ.

ಕಂಪನಿಯು ಸಲ್ಲಿಸಿರುವ 2018–19ನೇ ಆರ್ಥಿಕ ವರ್ಷದ ಜಿಎಸ್‌ಟಿ ರಿಟರ್ನ್ಸ್‌ಗೆ ಸಂಬಂಧಿಸಿದಂತೆ ವಾಣಿಜ್ಯ ತೆರಿಗೆ ಇಲಾಖೆಯು (ಆಡಿಟ್‌) ಮಾಲ್ಯಮಾಪನ ಮಾಡಿದೆ. ಇದರ ಅನುಸಾರ ಈ ಮೊತ್ತ ಪಾವತಿಸುವಂತೆ ಆದೇಶಿಸಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.