ADVERTISEMENT

ಅದಾನಿ ಕಂಪನಿಗಳಿಂದ ಹೆಚ್ಚುವರಿ ಷೇರುಗಳ ಅಡಮಾನ

ಪಿಟಿಐ
Published 12 ಫೆಬ್ರುವರಿ 2023, 20:24 IST
Last Updated 12 ಫೆಬ್ರುವರಿ 2023, 20:24 IST
   

ನವದೆಹಲಿ : ಅದಾನಿ ಸಮೂಹದ ಮೂರು ಕಂಪನಿಗಳು ಹೆಚ್ಚುವರಿ ಷೇರುಗಳನ್ನು ಅಡಮಾನ ಇಟ್ಟಿವೆ.

ಅದಾನಿ ಪೋರ್ಟ್ಸ್‌, ಅದಾನಿ ಎಂಟರ್‌ಪ್ರೈಸಸ್‌ ಮತ್ತು ಅದಾನಿ ಗ್ರೀನ್‌ ಎನರ್ಜಿ ಕಂಪನಿಗಳು ಎಸ್‌ಬಿಐಕ್ಯಾಪ್‌ ಟ್ರಸ್ಟೀ ಕಂಪನಿಯಲ್ಲಿ ಷೇರುಗಳನ್ನು ಅಡಮಾನ ಇರಿಸಿವೆ.

ಆಸ್ಟ್ರೇಲಿಯಾದಲ್ಲಿ ಕಾರ್‌ಮೈಕಲ್‌ ಕಲ್ಲಿದ್ದಲು ಗಣಿ ಯೋಜನೆಗಾಗಿ ಅದಾನಿ ಸಮೂಹಕ್ಕೆ ಬ್ಯಾಂಕ್‌ ಒಂದು ನೀಡಿದ್ದ ಸಾಲಕ್ಕೆ ಎಸ್‌ಬಿಐ ಲೆಟರ್‌ ಆಫ್‌ ಕ್ರೆಡಿಟ್‌ ನೀಡಿತ್ತು. ಹೀಗಾಗಿ ಸಮೂಹದ ಈ ಮೂರು ಕಂಪನಿಗಳು ಹೆಚ್ಚುವರಿ ಷೇರುಗಳನ್ನು ಎಸ್‌ಬಿಐನಲ್ಲಿ ಅಡಮಾನ ಇಟ್ಟಿವೆ.

ADVERTISEMENT

ಷೇರುಪೇಟೆಯಲ್ಲಿ ಇರುವ ಮಾಹಿತಿಯ ಪ್ರಕಾರ, ಅದಾನಿ ಪೋರ್ಟ್ಸ್ ಹೆಚ್ಚುವರಿಯಾಗಿ 75 ಲಕ್ಷ ಷೇರುಗಳನ್ನು ಅಡಮಾನ ಇಟ್ಟಿದೆ. ಇದರಿಂದ ಎಸ್‌ಬಿಐಕ್ಯಾಪ್‌ನಲ್ಲಿ ಒಟ್ಟು ಅಡಮಾನ ಇಟ್ಟಿರುವ ಷೇರು ಶೇ 1ರಷ್ಟಾಗಿದೆ. ಅದಾನಿ ಗ್ರೀನ್‌ ಕಂಪನಿಯು ಹೆಚ್ಚುವರಿಯಾಗಿ 60 ಲಕ್ಷ ಷೇರುಗಳನ್ನು ಅಡಮಾನ ಇಟ್ಟಿದ್ದು, ಒಟ್ಟು ಅಡಮಾನ ಇಟ್ಟಿರುವ ಷೇರುಗಳ ಪ್ರಮಾಣ ಶೇ 1.06ಕ್ಕೆ ತಲುಪಿದೆ. ಅದಾನಿ ಟ್ರಾನ್ಸ್‌ಮಿಷನ್‌ ಕಂಪನಿಯು 13 ಲಕ್ಷ ಹೆಚ್ಚುವರಿ ಷೇರುಗಳನ್ನು ಅಡಮಾನ ಇಟ್ಟಿದ್ದು, ಒಟ್ಟು ಷೇರುಗಳ ಪ್ರಮಾಣ 0.55ರಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.