ADVERTISEMENT

ಸೂಚ್ಯಂಕ 215 ಅಂಶ ಇಳಿಕೆ

ಬಡ್ಡಿ ದರ ಏರಿಕೆ ಆತಂಕ: ಬಂಡವಾಳ ಹೊರಹರಿವು

ಪಿಟಿಐ
Published 16 ಜೂನ್ 2018, 10:55 IST
Last Updated 16 ಜೂನ್ 2018, 10:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ : ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಹೆಚ್ಚಿದೆ. ಹೀಗಾಗಿ ಷೇರುಪೇಟೆಗಳಲ್ಲಿ ಇಳಿಮುಖ ವಹಿವಾಟು ನಡೆಯಿತು.

ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಮೂರು ದಿನಗಳ ಸಭೆಯು ಸೋಮವಾರ ಆರಂಭವಾಗಿದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಸಮಿತಿಯು ನಾಲ್ಕು ವರ್ಷಗಳ ಬಳಿಕ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಷೇರುಪೇಟೆಯಿಂದ ಬಂಡವಾಳ ಹಿಂದಕ್ಕೆ ಪಡೆದಿದ್ದರಿಂದ ಸೂಚ್ಯಂಕಗಳು ಇಳಿಕೆ ಕಾಣುವಂತಾಗಿದೆ.

ರಿಯಲ್ ಎಸ್ಟೇಟ್‌, ಬ್ಯಾಂಕಿಂಗ್‌, ಹಣಕಾಸು, ಗ್ರಾಹಕ ಬಳಕೆ ಮತ್ತು ಭಾರಿ ಯಂತ್ರೋಪಕರಣಗಳನ್ನು ಒಳಗೊಂಡು ಪ್ರಮುಖ ಷೇರುಗಳು ಹೆಚ್ಚಿನ ಕುಸಿತ ಕಂಡವು.

ADVERTISEMENT

ಜಾಗತಿಕ ವಹಿವಾಟಿನ ಪ್ರಭಾವಕ್ಕೆ ಒಳಗಾಗಿ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ದಿನದ ವಹಿವಾಟಿನಲ್ಲಿ 35,556 ಅಂಶಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಆರಂಭಿಸಿತ್ತು. ನಂತರ ಆರ್‌ಬಿಐ ಬಡ್ಡಿದರ ಇಳಿಕೆ ಸಾಧ್ಯತೆಯಿಂದ ಮಾರಾಟದ ಒತ್ತಡ ಹೆಚ್ಚಾಗಿ ಸೂಚ್ಯಂಕ 216 ಅಂಶ ಇಳಿಕೆ ಕಂಡು 35,011 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 67 ಅಂಶ ಇಳಿಕೆಯಾಗಿ 10,628 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.