ADVERTISEMENT

ಅದಾನಿ ಎಂಟರ್‌ಪ್ರೈಸಸ್‌ ಶೇ 28ರಷ್ಟು ಇಳಿಕೆ

ಪಿಟಿಐ
Published 1 ಫೆಬ್ರುವರಿ 2023, 16:26 IST
Last Updated 1 ಫೆಬ್ರುವರಿ 2023, 16:26 IST
ಗೌತಮ್ ಅದಾನಿ
ಗೌತಮ್ ಅದಾನಿ   

ನವದೆಹಲಿ: ಅದಾನಿ ಸಮೂಹದ ಕಂಪನಿಗಳ ಷೇರುಮೌಲ್ಯ ಬುಧವಾರ ಕುಸಿತ ಕಂಡಿದೆ. ಕಳೆದ ಐದು ವಹಿವಾಟು ದಿನಗಳಲ್ಲಿ ಸಮೂಹದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯವು ₹ 7 ಲಕ್ಷ ಕೋಟಿಗಿಂತ ಹೆಚ್ಚಿನ ಕುಸಿತ ಕಂಡಿದೆ.

ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಅದಾನಿ ಸಮೂಹದ ಕುರಿತು ವರದಿಯನ್ನು ಪ್ರಕಟಿಸಿದ ನಂತರದಲ್ಲಿ ಸಮೂಹದ ಕಂಪನಿಗಳ ಷೇರು ಮೌಲ್ಯ ಕುಸಿತ ಕಾಣುತ್ತಿದೆ. ಬುಧವಾರದ ವಹಿವಾಟಿನ ಕೊನೆಯಲ್ಲಿ, ಸಮೂಹದ ಎಲ್ಲ ಕಂಪನಿಗಳ ಷೇರುಮೌಲ್ಯವು ಕುಸಿತ ಕಂಡಿದೆ.

ಅದಾನಿ ಎಂಟರ್‌ಪ್ರೈಸಸ್‌ ಶೇ 28.45ರಷ್ಟು, ಅದಾನಿ ಪೋರ್ಟ್ಸ್‌ ಆ್ಯಂಡ್‌ ಸ್ಪೆಷನ್‌ ಎಕನಾಮಿಕ್ ಜೋನ್ ಶೇ 19.69ರಷ್ಟು, ಅದಾನಿ ಟೋಟಲ್ ಗ್ಯಾಸ್ ಶೇ 10ರಷ್ಟು, ಅದಾನಿ ಗ್ರೀನ್ ಎನರ್ಜಿ ಶೇ 5.78ರಷ್ಟು, ಅದಾನಿ ವಿಲ್ಮರ್ ಶೇ 4.99ರಷ್ಟು, ಅದಾನಿ ಪವರ್ ಶೇ 4.98ರಷ್ಟು, ಅದಾನಿ ಟ್ರಾನ್ಸ್‌ಮಿಷನ್‌ ಶೇ 2.46ರಷ್ಟು ಇಳಿಕೆ ಕಂಡಿವೆ. ಅಂಬುಜಾ ಸಿಮೆಂಟ್ಸ್ ಶೇ 16.56ರಷ್ಟು, ಎಸಿಸಿ ಶೇ 6.34ರಷ್ಟು ಹಾಗೂ ಎನ್‌ಡಿಟಿವಿ ಶೇ 4.98ರಷ್ಟು ಕುಸಿದಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.