ದೇಶದ ಆರೋಗ್ಯಸೇವಾ ವಲಯದ ಪ್ರಮುಖ ಕಂಪನಿಗಳ ಪೈಕಿ ಒಂದಾಗಿರುವ ಅಪೋಲೊ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಕಂಪನಿಯ ಷೇರುಬೆಲೆಯು ₹9,300ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಪ್ರಭುದಾಸ್ ಲೀಲಾಧರ್ ಅಂದಾಜು ಮಾಡಿದೆ.
ಆರೋಗ್ಯಸೇವಾ ವಲಯದ ಇತರ ಕೆಲವು ಷೇರುಗಳಿಗೆ ಹೋಲಿಕೆ ಮಾಡಿದರೆ ಅಪೋಲೊ ಹಾಸ್ಟಿಟಲ್ ಎಂಟರ್‌ಪ್ರೈಸ್‌ನ ಷೇರುಮೌಲ್ಯವು 2023–24ನೇ ಹಣಕಾಸು ವರ್ಷದಲ್ಲಿ ಹೆಚ್ಚು ಉತ್ತಮ ಗಳಿಕೆ ನೀಡಿಲ್ಲ ಎಂದು ಪ್ರಭುದಾಸ್ ಲೀಲಾಧರ್ ಹೇಳಿದೆ.
2024–25ರಿಂದ 2027–28ನೇ ಹಣಕಾಸು ವರ್ಷದವರೆಗೆ ಕಂಪನಿಯ ಗಳಿಕೆಯ (ಎಬಿಟ್‌ಡಾ) ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು ಶೇ 26ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಮುಂದಿನ 12 ತಿಂಗಳುಗಳಲ್ಲಿ ಕಂಪನಿಯು ಬೆಂಗಳೂರು, ಕೋಲ್ಕತ್ತ, ಪುಣೆ, ದೆಹಲಿಯಂತಹ ಪ್ರಮುಖ ನಗರಗಳಲ್ಲಿ ಒಟ್ಟು ಏಳು ಆಸ್ಪತ್ರೆಗಳ ಕಾರ್ಯಾಚರಣೆ ಆರಂಭಿಸಲಿದೆ. ಇವೆಲ್ಲವುಗಳ ಪ್ರಯೋಜನವು 2026–27 ಹಾಗೂ 2027–28ರ ದ್ವಿತೀಯಾರ್ಧದಲ್ಲಿ ಕಾಣಸಿಗಲಿದೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಕಂಪನಿಯ ಷೇರು ಮೌಲ್ಯವು ₹7,745 ಆಗಿತ್ತು.
(ಬ್ರೋಕರೇಜ್ ಕಂಪನಿಗಳು ನೀಡುವ ಮಾಹಿತಿ, ವಿವರಗಳಿಗೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.