ದೇಶದ ದೂರಸಂಪರ್ಕ ಸೇವಾ ಕಂಪನಿಗಳಲ್ಲಿ ಒಂದಾಗಿರುವ ಭಾರ್ತಿ ಏರ್‌ಟೆಲ್‌ನ ಷೇರುಮೌಲ್ಯವು ₹2,200ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಅಂದಾಜು ಮಾಡಿದೆ. ಭಾರ್ತಿ ಏರ್‌ಟೆಲ್ ಜೂನ್ ತ್ರೈಮಾಸಿಕದ ತನ್ನ ಹಣಕಾಸು ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ.
ಕಂಪನಿಯು ಪ್ರತಿ ಬಳಕೆದಾರನಿಂದ ಪಡೆಯುವ ವರಮಾನವು ವೃದ್ಧಿಸಿದೆ. ಕಂಪನಿಯ ಆಫ್ರಿಕಾ ವಹಿವಾಟುಗಳ ವರಮಾನವು ನಿರೀಕ್ಷೆಗಿಂತ ಹೆಚ್ಚಳ ಕಂಡಿದೆ. ಭಾರತದಲ್ಲಿನ ವಯರ್‌ಲೆಸ್ ಸೇವೆಗಳ ವರಮಾನವು ಕೂಡ ಹೆಚ್ಚಳ ಕಂಡಿದೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.
ಕಂಪನಿಯ ಒಟ್ಟು ವರಮಾನದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು (ಸಿಎಜಿಆರ್) 2024–25ರಿಂದ 2027–28ರವರೆಗೆ ಶೇ 14ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಡಿಸೆಂಬರ್ ನಂತರದಲ್ಲಿ ಭಾರತದಲ್ಲಿನ ವಯರ್‌ಲೆಸ್ ಸೇವೆಗಳ ಶುಲ್ಕವು ಶೇ 15ರಷ್ಟು ಹೆಚ್ಚಳ ಕಾಣಬಹುದು ಎಂದು ಕೂಡ ಬ್ರೋಕರೇಜ್ ಸಂಸ್ಥೆ ಅಂದಾಜಿಸಿದೆ. ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಭಾರ್ತಿ ಏರ್‌ಟೆಲ್ ಷೇರುಮೌಲ್ಯವು ₹1,924 ಆಗಿತ್ತು.
(ಬ್ರೋಕರೇಜ್ ಸಂಸ್ಥೆಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.