ADVERTISEMENT

ಮ್ಯೂಚುವಲ್‌ ಫಂಡ್ಸ್‌ನಿಂದ ₹ 193 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 20:29 IST
Last Updated 1 ಆಗಸ್ಟ್ 2019, 20:29 IST
   

ನವದೆಹಲಿ: ವಿ. ಜಿ. ಸಿದ್ಧಾರ್ಥ ಅವರಿಗೆ ಸೇರಿದ ಕಾಫಿ ಡೇ ನ್ಯಾಚುರಲ್‌ ರಿಸೋರ್ಸಸ್‌ ಮತ್ತು ಟ್ಯಾಂಗ್ಲಿನ್‌ ಡೆವಲಪ್‌ಮೆಂಟ್ಸ್‌ಗಳಲ್ಲಿ ಮ್ಯೂಚುವಲ್‌ ಫಂಡ್ಸ್‌ಗಳು ₹ 193 ಕೋಟಿಗೂ ಹೆಚ್ಚು ಬಂಡವಾಳ ತೊಡಗಿಸಿರುವುದು ಬೆಳಕಿಗೆ ಬಂದಿದೆ.

ಹಣಕಾಸು ಮಾಹಿತಿ ಒದಗಿಸುವ ‘ಮಾರ್ನಿಂಗ್‌ಸ್ಟಾರ್‌’ ಜಾಲತಾಣದ ಪ್ರಕಾರ, ಕಾಫಿ ಡೇ ನ್ಯಾಚುರಲ್‌ ರಿಸೋರ್ಸಸ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ₹ 148.71 ಕೋಟಿ ಹೂಡಿಕೆ ಮಾಡ ಲಾಗಿದೆ. ಡಿಎಸ್‌ಪಿ ಕ್ರೆಡಿಟ್‌ ರಿಸ್ಕ್‌ ಫಂಡ್‌ ಗರಿಷ್ಠ ₹ 132.08 ಕೋಟಿ ತೊಡಗಿಸಿದೆ. ಬಿಒಐ ಎಎಕ್ಸ್‌ಎ ಎಸ್‌/ಟಿ ಇನ್‌ಕಂ ಮತ್ತು ಬಿಒಐ ಎಎಕ್ಸ್‌ಎ ಕ್ರೆಡಿಟ್‌ ರಿಸ್ಕ್‌ ಫಂಡ್‌ ಕೂಡ ಹೂಡಿಕೆ ಮಾಡಿವೆ.

ರಿಯಲ್‌ ಎಸ್ಟೇಟ್‌ ವಹಿವಾಟು ನಡೆಸುವ ಟ್ಯಾಂಗ್ಲಿನ್‌ ಡೆವಲಪ್‌ಮೆಂಟ್ಸ್‌ ಲಿ.ನಲ್ಲಿ ₹ 44 ಕೋಟಿ ತೊಡಗಿಸಲಾಗಿದೆ. ಇಂಡಿಯಾಬುಲ್ಸ್‌ ಇನ್‌ಕಂ ಫಂಡ್‌, ಇಂಡಿಯಾಬುಲ್ಸ್‌ ಸೇವಿಂಗ್ಸ್‌ ಇನ್‌ಕಂ ಫಂಡ್‌ ಮತ್ತು ಇಂಡಿಯಾಬುಲ್ಸ್‌ ಶಾರ್ಟ್‌ ಟರ್ಮ್‌ ಫಂಡ್‌ ಹೂಡಿವೆ.

ADVERTISEMENT

ಕಂಪನಿ ವ್ಯವಹಾರ ಸಚಿವಾಲಯದಲ್ಲಿ ನೋಂದಣಿ ಆಗಿರುವ 6 ಕಂಪನಿಗಳಲ್ಲಿ ಸಿದ್ಧಾರ್ಥ ಅವರು ನಿರ್ದೇಶಕರಾಗಿದ್ದರು. ಕಾಫಿ ಡೇ ಗ್ಲೋಬಲ್‌, ಕಾಫಿ ಡೇ ಎಂಟರ್‌ಪ್ರೈಸಸ್‌, ಕಾಫಿ ಡೇ ಕಬಿನಿ ರೆಸಾರ್ಟ್ಸ್‌, ಕಾಫಿ ಡೇ ರೆಸಾರ್ಟ್ಸ್‌ (ಎಂಎಸ್‌ಎಂ), ಸಿವನ್‌ ಸೆಕ್ಯುರಿಟೀಸ್‌ ಮತ್ತು ಇಟ್ಟಿಯಂ ಸಿಸ್ಟಮ್ಸ್‌ನಲ್ಲಿ ನಿರ್ದೇಶಕರಾಗಿರುವುದು ಸಚಿವಾಲಯದಲ್ಲಿ ಇರುವ ಮಾಹಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.