ADVERTISEMENT

ಷೇರು ಮಾರುಕಟ್ಟೆಗೂ ತಟ್ಟಿದ ಕೊರೊನಾ ಭೀತಿ; ಸೆನ್ಸೆಕ್ಸ್​ 2000 ಅಂಕ ಕುಸಿತ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 4:48 IST
Last Updated 16 ಮಾರ್ಚ್ 2020, 4:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೊರೊನಾ ಭೀತಿ ಷೇರು ಮಾರುಕಟ್ಟೆಗೂ ತಟ್ಟಿದ್ದು ಸೋಮವಾರ ಬೆಳಗ್ಗೆ ಸೆನ್ಸೆಕ್ಸ್ 2000 ಅಂಕ ಮತ್ತು ನಿಫ್ಟಿ 9400 ಅಂಕ ಕುಸಿತ ಕಂಡಿದೆ.

ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯ 73.91 ಆಗಿತ್ತು. ಸೋಮವಾರ ವಹಿವಾಟು ಆರಂಭವಾದಾಗ ರೂಪಾಯಿ ಬೆಲೆ 74.11 ಆಗಿದೆ.

ವಹಿವಾಟು ಸೂಚ್ಯಂಕದಲ್ಲಿ ಪ್ರಸ್ತುತ ದಿವಾಳಿಯಾಗಿರುವ ಯೆಸ್ ಬ್ಯಾಂಕ್ ಲಾಭ ಗಳಿಸಿದ್ದು, ಎಚ್‌ಡಿಎಫ್​ಸಿ, ಐಸಿಐಸಿಐ ಬ್ಯಾಂಕ್, ಎಸ್​ಬಿಐ, ಸನ್ ಫಾರ್ಮಾ, ಡಿಎಲ್ಎಫ್ ನಷ್ಟ ಅನುಭವಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.