ADVERTISEMENT

ವಿದೇಶಿ ವಿನಿಮಯ ಸಂಗ್ರಹ ದಾಖಲೆ

ಪಿಟಿಐ
Published 30 ನವೆಂಬರ್ 2019, 2:13 IST
Last Updated 30 ನವೆಂಬರ್ 2019, 2:13 IST
.
.   

ನವದೆಹಲಿ: ವಿದೇಶಿ ವಿನಿಮಯ ಮೀಸಲು ಸಂಗ್ರಹ ನವೆಂಬರ್‌ 22ರ ಅಂತ್ಯಕ್ಕೆ ₹2,498 ಕೋಟಿ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 32.32 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಅದಕ್ಕೂ ಹಿಂದಿನ ವಾರ ₹ 3,175 ಕೋಟಿ ಹೆಚ್ಚಾಗಿ ₹ 32.25 ಲಕ್ಷ ಕೋಟಿಗಳಿಗೆ ತಲುಪಿತ್ತು ಎಂದು ಆರ್‌ಬಿಐ ಮಾಹಿತಿ ನೀಡಿದೆ.

ವಿದೇಶಿ ವಿನಿಮಯ ಮೀಸಲು ಸಂಗ್ರಹದಲ್ಲಿ ವಿದೇಶಿ ಕರೆನ್ಸಿಗಳ ಪಾಲು ಗರಿಷ್ಠ ಮಟ್ಟದಲ್ಲಿದೆ. ವಿದೇಶಿ ಕರೆನ್ಸಿಗಳ ಸಂಗ್ರಹವು ₹ 1,828 ಕೋಟಿ ಹೆಚ್ಚಾಗಿ ₹ 30 ಲಕ್ಷ ಕೋಟಿಗೆ ಏರಿಕೆಯಾಗಿದೆ.

ADVERTISEMENT

ಚಿನ್ನದ ಮೀಸಲು ಸಂಗ್ರಹ ₹626 ಕೋಟಿ ಏರಿಕೆ ಕಂಡು ₹ 1.94 ಲಕ್ಷ ಕೋಟಿಗೆ ತಲುಪಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್‌) ಭಾರತದ ಕರೆನ್ಸಿ ಸಂಗ್ರಹ ₹ 36 ಕೋಟಿ ಹೆಚ್ಚಾಗಿದ್ದು, ₹ 25,920 ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.