ADVERTISEMENT

ಬ್ರೋಕರೇಜ್ ಮಾತು: ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಮೌಲ್ಯ ₹2,200 ತಲುಪುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 21:11 IST
Last Updated 25 ಜೂನ್ 2025, 21:11 IST
   

ದೇಶದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ 2024–25ನೆಯ ಹಣಕಾಸು ವರ್ಷದ ನಾಲ್ಕನೆಯ ತ್ರೈಮಾಸಿಕದಲ್ಲಿ ₹17 ಸಾವಿರ ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ ಲಾಭಕ್ಕೆ ಹೋಲಿಸಿದರೆ ಶೇಕಡ 7ರಷ್ಟು ಹೆಚ್ಚು. ಅಲ್ಲದೆ, ಈ ಅವಧಿಯಲ್ಲಿ ಬ್ಯಾಂಕ್‌ನ ನಿವ್ವಳ ಬಡ್ಡಿ ವರಮಾನವು ಶೇ 10.3ರಷ್ಟು ಹೆಚ್ಚಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರು ಮೌಲ್ಯವು ₹2,200ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಅಂದಾಜಿಸಿದೆ. ಬ್ಯಾಂಕ್‌ನ ಸಾಲ ನೀಡಿಕೆ ಪ್ರಮಾಣದ ಏರಿಕೆಯು ಶೇ 5.4ರಷ್ಟು ಇದೆ. ಠೇವಣಿಗಳಲ್ಲಿ ಏರಿಕೆಯ ಪ್ರಮಾಣವು
ಶೇ 14ರಷ್ಟಾಗಿದೆ ಎಂದು ಸಂಸ್ಥೆ ಹೇಳಿದೆ.

2025–26 ಹಾಗೂ 2026–27ನೆಯ ಹಣಕಾಸು ವರ್ಷಗಳಲ್ಲಿ ಸಾಲ ನೀಡಿಕೆ ಪ್ರಮಾಣವು ಕ್ರಮವಾಗಿ ಶೇ 10ರಷ್ಟು ಹಾಗೂ ಶೇ 13ರಷ್ಟು ಹೆಚ್ಚಳ ಕಾಣಬಹುದು ಎಂದು ಮೋತಿಲಾಲ್ ಓಸ್ವಾಲ್ ಅಂದಾಜು ಮಾಡಿದೆ. ⇒(ಬ್ರೋಕರೇಜ್ ಸಂಸ್ಥೆಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆ ಅಲ್ಲ.)

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.