ADVERTISEMENT

ಸೆನ್ಸೆಕ್ಸ್‌ 1,600 ಅಂಕ ಕುಸಿತ: ಹೂಡಿಕೆದಾರರ ₹7ಲಕ್ಷ ಕೋಟಿ ಸಂಪತ್ತು ನಷ್ಟ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 9:44 IST
Last Updated 13 ಜೂನ್ 2022, 9:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಮುಂಬೈ: ಸೋಮವಾರ ಮಧ್ಯಾಹ್ನದ ಷೇರು ವಹಿವಾಟಿನಲ್ಲಿ ಸೆನ್ಸೆಕ್ಸ್‌ 1,600 ಅಂಕಗಳಷ್ಟು ಕುಸಿತ ಕಂಡಿದ್ದು, ಹೂಡಿಕೆದಾರರ ಸುಮಾರು ₹7 ಲಕ್ಷ ಕೋಟಿ ನಷ್ಟವಾಯಿತು.

ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಭಾರತದ ಮಾರುಕಟ್ಟೆಗಳಿಂದ ಬಂಡವಾಳ ಹಿಂದಕ್ಕೆ ಪಡೆಯುವುದು ಹೆಚ್ಚಾದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಕುಸಿತ ಕಂಡಿತು.

ಅಮೆರಿಕ ಹಣದುಬ್ಬರವು ಮೇ ತಿಂಗಳಲ್ಲಿ, 40-ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ(ಶೇ 8.6) ತಲುಪಿದ ಕಾರಣದಿಂದ ಹೂಡಿಕೆ ಹಿಂತೆಗೆತ ಹೆಚ್ಚಾಗುತ್ತಿದೆ.

ADVERTISEMENT

ಇದೇ ವೇಳೆ ಭಾರತೀಯ ರುಪಾಯಿ ಪ್ರತಿ ಡಾಲರ್‌ಗೆ ದಾಖಲೆಯ 78.10ಕ್ಕೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.