ನವದೆಹಲಿ: ಇಸ್ರೇಲ್–ಇರಾನ್ ಬಿಕ್ಕಟ್ಟು ಮತ್ತು ಕಚ್ಚಾ ತೈಲ ಬೆಲೆಯು ಈ ವಾರ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.
‘ಜಾಗತಿಕ ರಾಜಕೀಯ ಅನಿಶ್ಚಿತತೆ ಮುಂದುವರಿದಿದೆ. ಮುಂಬರಲಿರುವ ಅಮೆರಿಕದ ಜಿಡಿಪಿ ದತ್ತಾಂಶ ಮತ್ತು ವೈಯಕ್ತಿಕ ಬಳಕೆ ವೆಚ್ಚ, ಭಾರತದ ಪರ್ಚೇಸಿಂಗ್ ಮ್ಯಾನೇರ್ಜಸ್ ಸೂಚ್ಯಂಕದತ್ತ ಹೂಡಿಕೆದಾರರು ಗಮನ ನೀಡಿದ್ದಾರೆ’ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.