ADVERTISEMENT

ಕಂಪನಿಗಳ ಮಾರುಕಟ್ಟೆ ಬಂಡವಾಳ ದಾಖಲೆಯ ₹192 ಲಕ್ಷ ಕೋಟಿಗೆ ಏರಿಕೆ

ಪಿಟಿಐ
Published 5 ಜನವರಿ 2021, 13:44 IST
Last Updated 5 ಜನವರಿ 2021, 13:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂಬೈ ಷೇರುಪೇಟೆಯಲ್ಲಿ (ಬಿಎಸ್‌ಇ) ನೋಂದಾಯಿತ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳವು ದಾಖಲೆಯ ₹ 192.87 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಸತತ 10ನೇ ವಹಿವಾಟು ಅವಧಿಯಲ್ಲಿಯೂ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಈ ಅವಧಿಯಲ್ಲಿ ಬಿಎಸ್‌ಇ ಸೂಚ್ಯಂಕ 2,884 ಅಂಶಗಳಷ್ಟು ಏರಿಕೆ ಕಂಡಿದೆ.

10 ದಿನಗಳ ವಹಿವಾಟಿನಲ್ಲಿ ಕಂಪನಿಗಳ ಮಾರುಕಟ್ಟೆ ಬಂಡವಾಳ ₹ 14,08,195 ಕೋಟಿಗಳಷ್ಟು ಏರಿಕೆಯಾಗಿದ್ದು ₹ 192.87 ಲಕ್ಷ ಕೋಟಿಗಳಿಗೆ ತಲುಪಿದೆ.

ADVERTISEMENT

2020ರಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ ಶೇ 15.7ರಷ್ಟು ಗಳಿಕೆ ಕಂಡಿದೆ. ಅದೇ ರೀತಿ ಹೂಡಿಕೆದಾರರ ಸಂಪತ್ತು ₹ 32.49 ಲಕ್ಷ ಕೋಟಿಗಳಷ್ಟು ವೃದ್ಧಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.