ADVERTISEMENT

ಲಾಭ ಗಳಿಕೆ, ಸೂಚ್ಯಂಕ ಇಳಿಕೆ

ರೂಪಾಯಿ ಮೌಲ್ಯ ಇಳಿಕೆ, ಜಾಗತಿಕ ವಾಣಿಜ್ಯ ಸಮರದ ಪರಿಣಾಮ

ಪಿಟಿಐ
Published 23 ಅಕ್ಟೋಬರ್ 2018, 16:48 IST
Last Updated 23 ಅಕ್ಟೋಬರ್ 2018, 16:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ರೂಪಾಯಿ ಮೌಲ್ಯ ಇಳಿಕೆ ಮತ್ತು ಜಾಗತಿಕ ವಾಣಿಜ್ಯ ಸಮರವು ದೇಶದ ಷೇರುಪೇಟೆಯ ವಾತಾವರಣ
ಕದಡಿವೆ.

ಸತತ ನಾಲ್ಕನೇ ವಹಿವಾಟು ಅವಧಿಯಲ್ಲಿಯೂ ನಕಾರಾತ್ಮಕ ಚಟುವಟಿಕೆ ಮುಂದುವರಿಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 287 ಅಂಶ ಇಳಿಕೆ ಕಂಡು ಆರು ತಿಂಗಳ ಕನಿಷ್ಠ ಮಟ್ಟವಾದ 33,847 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 98 ಅಂಶ ಇಳಿಕೆ ಕಂಡು ಆರು ತಿಂಗಳ ಕನಿಷ್ಠ ಮಟ್ಟವಾದ 10,146 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 1 ಪೈಸೆ ಇಳಿಕೆ ಕಂಡು ಒಂದು ಡಾಲರ್‌ಗೆ ₹ 73.57ರಂತೆ ವಿನಿಮಯಗೊಂಡಿತು.

ಚೀನಾ ಮತ್ತು ಅಮೆರಿಕ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರವೂ ಹೂಡಿಕೆ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಸೌದಿ ಪತ್ರಕರ್ತ ಖಶೋಗ್ಗಿ ಹತ್ಯೆಯು ಜಾಗತಿಕ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಈ ಬೆಳವಣಿಗೆ ಸಹ ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆ ಚಟುವಟಿಕೆಯನ್ನು ತಗ್ಗುವಂತೆ ಮಾಡಿದೆ.

‘ಹೂಡಿಕೆದಾರರು ಮಾಹಿತಿ ತಂತ್ರಜ್ಞಾನ (ಐ.ಟಿ) ಮತ್ತು ಔಷಧ ವಲಯದ ಷೇರುಗಳಲ್ಲಿ ಲಾಭ ಗಳಿಕೆಯ ಉದ್ದೇಶದ ವಹಿವಾಟು ನಡೆಸಿದರು. ಇದರಿಂದಾಗಿ ಸೂಚ್ಯಂಕ ಇಳಿಕೆ ಕಾಣುವಂತಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಬಂಡವಾಳ ಮಾರುಕಟ್ಟೆಯ ಮುಖ್ಯಸ್ಥ ವಿ.ಕೆ. ಶರ್ಮಾ ಅವರು ವಿಶ್ಲೇಷಣೆ ಮಾಡಿದ್ದಾರೆ.

ಏಷ್ಯಾ ಮತ್ತು ಯುರೋಪ್‌ ಮಾರುಕಟ್ಟೆಗಳಲ್ಲಿಯೂ ಇಳಿಮುಖವಾಗಿ ವಹಿವಾಟು ಅಂತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.