ADVERTISEMENT

ರಿಯಲ್‌ ಎಸ್ಟೇಟ್‌ ಷೇರು ಮೌಲ್ಯ ಏರಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 16:02 IST
Last Updated 5 ಏಪ್ರಿಲ್ 2024, 16:02 IST
   

ನವದೆಹಲಿ: ಆರ್‌ಬಿಐ ರೆಪೊ ದರವನ್ನು ಯಥಾಸ್ಥಿತಿ ಕಾಯ್ದುಕೊಂಡಿರುವ ಬೆನ್ನಲ್ಲೇ ರಿಯಲ್‌ ಎಸ್ಟೇಟ್‌ ಷೇರುಗಳ ಮೌಲ್ಯ ಶುಕ್ರವಾರ ಏರಿಕೆ ಕಂಡಿದೆ.

ಗೋದ್ರೇಜ್‌ ಪ್ರಾಪರ್ಟಿಸ್‌ (ಶೇ 3.92), ಮಹೀಂದ್ರ ಲೈಫ್‌ಸ್ಪೇಸ್‌ ಡೆವಲಪರ್ಸ್‌ (ಶೇ 2.59), ಮ್ಯಾಕ್ರೋಟೆಕ್‌ ಡೆವಲಪರ್ಸ್‌ (ಶೇ 1.99), ಡಿಎಲ್‌ಎಫ್‌ (ಶೇ 1.98), ಒಬೆರಾಯ್‌ (ಶೇ 0.96) ಬ್ರಿಗೇಡ್‌ ಎಂಟರ್‌ಪ್ರೈಸಸ್‌ (ಶೇ 0.86) ಷೇರಿನ ಮೌಲ್ಯ ಏರಿಕೆ ಆಗಿದೆ.

ಪ್ರೆಸ್ಟೀಜ್‌ ಎಸ್ಟೇಟ್ಸ್‌ ಪ್ರಾಜೆಕ್ಟ್ಸ್‌ (ಶೇ 1.14), ಶೋಭಾ (ಶೇ 0.53) ಮತ್ತು ಫೀನಿಕ್ಸ್‌ ಮಿಲ್ಸ್‌ (ಶೇ 0.22) ಷೇರಿನ ಮೌಲ್ಯ ಇಳಿಕೆ ಆಗಿದೆ. ಸೆನೆಕ್ಸ್‌ 20 ಅಂಶ ಏರಿಕೆಯಾಗಿ 74,248ಕ್ಕೆ ಸ್ಥಿರಗೊಂಡಿದೆ. ನಿಫ್ಟಿ 1 ಅಂಶ ಹೆಚ್ಚಳವಾಗಿ 22,513ಕ್ಕೆ ಕೊನೆಗೊಂಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.