ADVERTISEMENT

Share Market | ಪುಟಿದೆದ್ದ ಷೇರು ಸೂಚ್ಯಂಕಗಳು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 13:40 IST
Last Updated 9 ಆಗಸ್ಟ್ 2024, 13:40 IST
<div class="paragraphs"><p>ಷೇರುಪೇಟೆ</p></div>

ಷೇರುಪೇಟೆ

   

(ಸಾಂದರ್ಭಿಕ ಚಿತ್ರ)

ಮುಂಬೈ: ರಿಲಯನ್ಸ್‌ ಇಂಡಸ್ಟ್ರಿಸ್‌, ಇನ್ಫೊಸಿಸ್‌ ಷೇರುಗಳ ಖರೀದಿ ಹೆಚ್ಚಳದಿಂದಾಗಿ ಷೇರು ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಶೇ 1ರಷ್ಟು ಏರಿಕೆ ಕಂಡಿವೆ.‌

ADVERTISEMENT

ಸೂಚ್ಯಂಕಗಳ ಏರಿಕೆಯಿಂದ ಹೂಡಿಕೆದಾರರು ₹4.46 ಲಕ್ಷ ಕೋಟಿ ಗಳಿಸಿದ್ದಾರೆ. ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ ₹450 ಲಕ್ಷ ಕೋಟಿಗೆ ತಲುಪಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 819 ಅಂಶ ಏರಿಕೆ ಕಂಡು 79,705ಕ್ಕೆ ಸ್ಥಿರಗೊಂಡಿತು. ವಹಿವಾಟಿನ ವೇಳೆ 1,098 ಅಂಶ ಹೆಚ್ಚಳ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 250 ಅಂಶ ಹೆಚ್ಚಳವಾಗಿ 24,367 ಅಂಶಕ್ಕೆ ಅಂತ್ಯಗೊಂಡಿತು. ವಹಿವಾಟಿನ ವೇಳೆ 302 ಅಂಶ ಏರಿಕೆಯಾಗಿತ್ತು. 

‘ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಕಡಿಮೆಯಾಗಿದೆ. ಇದು ಜಾಗತಿಕ ಷೇರುಪೇಟೆಗಳಲ್ಲಿ ಏರಿಕೆಗೆ ನೆರವಾಗಿದೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ (ಸಂಶೋಧನ) ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಮಹೀಂದ್ರ ಆ್ಯಂಡ್‌ ಮಹೀಂದ್ರ, ಟಾಟಾ ಮೋಟರ್ಸ್‌, ಟೆಕ್‌ ಮಹೀಂದ್ರ, ಜೆಎಸ್‌ಡಬ್ಲ್ಯು ಸ್ಟೀಲ್‌, ಎಸ್‌ಬಿಐ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಇನ್ಫೊಸಿಸ್‌ನ ಷೇರಿನ ಮೌಲ್ಯದಲ್ಲಿ ಏರಿಕೆ ಆಗಿದೆ.

ಕೋಟಕ್‌ ಮಹೀಂದ್ರ ಬ್ಯಾಂಕ್‌ ಮತ್ತು ಮಾರುತಿ ಸುಜುಕಿ ಕಂಪನಿಯ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಟೋಕಿಯೊ, ಸೋಲ್‌ ಮತ್ತು ಹಾಂಗ್‌ಕಾಂಗ್‌ ಮಾರುಕಟ್ಟೆ ಏರಿಕೆ ಕಂಡಿದ್ದರೆ, ಶಾಂಘೈ ಇಳಿಕೆ ದಾಖಲಿಸಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರದ ವಹಿವಾಟಿನಲ್ಲಿ ₹2,626 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.