ADVERTISEMENT

ಮುಂಬೈ ಷೇರುಪೇಟೆ 3,934, ನಿಫ್ಟಿ 1,135 ಅಂಶ ಕುಸಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2020, 10:31 IST
Last Updated 23 ಮಾರ್ಚ್ 2020, 10:31 IST
   

ನವದೆಹಲಿ: ಕೊರೊನಾವೈರಸ್ ಭೀತಿಯಿಂದ ಷೇರುಪೇಟೆಯಲ್ಲಿ ಪ್ರತಿಧ್ವನಿಸಿದೆ. ಮುಂಚೂಣಿ ಕಂಪನಿಗಳ ಷೇರುಗಳೂ ಮೌಲ್ಯ ಕಳೆದುಕೊಳ್ಳುತ್ತಿದ್ದು, ಹೂಡಿಕೆದಾರರ ಸಂಪತ್ತು ಮಂಜಿನಂತೆ ಕರಗುತ್ತಿದೆ.

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸಿಕ್ಸ್ 3934 ಅಂಶಗಳ ಪತನ ಕಂಡು, 26,000 ಅಂಶಗಳಿಗಿಂತಲೂ ಕೆಳಗಿಳಿಯಿತು. 25,981.24 ಅಂಶಗಳೊಂದಿಗೆ ದಿನದ ವಹಿವಾಟು ಮುಗಿಸಿತು.

ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ 1,135ಅಂಶಗಳ ಪತನ ಕಂಡು, 7610.25 ಅಂಶಗಳೊಂದಿಗೆ ದಿನದ ವಹಿವಾಟು ಮುಗಿಸಿತು.

ADVERTISEMENT

ಕೊರೊನಾ ವೈರಸ್‌ ಸೋಂಕು ತಡೆಯುವ ನಿಟ್ಟಿನಲ್ಲಿ ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್‌ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರದಿಂದಾಚೆಗೆ ಸಂಭವಿಸಿದ ತ್ವರಿತ ಬೆಳವಣಿಗೆಗಳು ಸೋಮವಾರ ಷೇರುಪೇಟೆಗಳಲ್ಲಿ ವಿಪರೀತ ತಲ್ಲಣ ಸೃಷ್ಟಿಸಿತು.

ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್‌ 2,700 ಅಂಶ ಕುಸಿಯಿತು. ಸೂಚ್ಯಂಕ ದಿಢೀರ್‌ ಕುಸಿತದಿಂದ ಸರ್ಕ್ಯೂಟ್‌ ಬ್ರೇಕ್‌ ಮೂಲಕ 45 ನಿಮಿಷ ವಹಿವಾಟು ಸ್ಥಗಿತಗೊಳಿಸಲಾಯಿತು.

ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಶೇ 5.75 ಏರಿಕೆಯೊಂದಿಗೆ 29,915.96 ಅಂಶ ಹಾಗೂ ನಿಫ್ಟಿ ಶೇ 5.83 ಹೆಚ್ಚಳದೊಂದಿಗೆ 8,745.45 ಅಂಶಗಳೊಂದಿಗೆ ವಹಿವಾಟು ಅಂತ್ಯಗೊಂಡಿತ್ತು.

ಕಳೆದ ಸೋಮವಾರದಿಂದ ಶುಕ್ರವಾರದವರೆಗೂ ಸೆನ್ಸೆಕ್ಸ್‌ ಒಟ್ಟು 4,187.52 ಅಂಶಗಳಷ್ಟು ಕುಸಿದರೆ, ನಿಫ್ಟಿ 1,209.75 ಅಂಶ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.