ADVERTISEMENT

ಸೂಚ್ಯಂಕ 272 ಅಂಶ ಇಳಿಕೆ

ಪಿಟಿಐ
Published 24 ಡಿಸೆಂಬರ್ 2018, 18:17 IST
Last Updated 24 ಡಿಸೆಂಬರ್ 2018, 18:17 IST

ಮುಂಬೈ: ಮಾರಾಟದ ಒತ್ತಡಕ್ಕೆ ಒಳಗಾಗಿ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸೂಚ್ಯಂಕಗಳು ಇಳಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 272 ಅಂಶ ಇಳಿಕೆ ಕಂಡು 35,470 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಶುಕ್ರವಾರದ ವಹಿವಾಟಿನಲ್ಲಿ 690 ಅಂಶ ಕುಸಿತ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 90 ಅಂಶ ಇಳಿಕೆಯಾಗಿ 10,663 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ಅಮೆರಿಕದಲ್ಲಿ ಮೂಡಿರುವ ರಾಜಕೀಯ ಅಸ್ಥಿರತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಮಂದಗತಿಯ ವಹಿವಾಟು ನಡೆಯಿತು. ಇದರ ಪ್ರಭಾವಕ್ಕೆ ಒಳಗಾಗಿ ರಿಯಲ್ ಎಸ್ಟೇಟ್‌, ಗ್ರಾಹಕ ಬಳಕೆ ವಸ್ತುಗಳು, ಲೋಹ ಹಾಗೂ ವಾಹನ ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾಗಿ ನಕಾರಾತ್ಮಕ ವಹಿವಾಟು ನಡೆಯುವಂತಾಯಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ರೂಪಾಯಿ ಮೌಲ್ಯ ವರ್ಧನೆ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಕಂಡಿರುವುದು ವಿದೇಶಿ ಸಾಂಸ್ಥಿಕ ಹೂಡಿಕೆಯನ್ನು ಹೆಚ್ಚಿಸಿತು. ಇದರಿಂದ ಸೂಚ್ಯಂಕ ಹೆಚ್ಚಿನ ಇಳಿಕೆ ಕಾಣಲಿಲ್ಲ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.