ADVERTISEMENT

ಷೇರುಪೇಟೆ: ಸಕಾರಾತ್ಮಕ ವಹಿವಾಟು

ಪಿಟಿಐ
Published 19 ಮೇ 2020, 19:45 IST
Last Updated 19 ಮೇ 2020, 19:45 IST

ಮುಂಬೈ : ದೇಶದ ಷೇರುಪೇಟೆಗಳು ಆರಂಭದ ವಹಿವಾಟಿನಲ್ಲಿ ಕಂಡುಕೊಂಡಿದ್ದ ಏರಿಕೆಯಲ್ಲಿ ಹೆಚ್ಚಿನದನ್ನು ಕಳೆದುಕೊಂಡರೂ ಸಕಾರಾತ್ಮಕ ವಹಿವಾಟಿನಲ್ಲಿ ದಿನದ ಅಂತ್ಯ ಕಂಡಿವೆ.

ಕೋವಿಡ್‌–19ಗೆ ಚಿಕಿತ್ಸೆ ಕಂಡುಹಿಡಿಯುವ ಪ್ರಯತ್ನಕ್ಕೆ ವೇಗ ದೊರೆತಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದು, ದೇಶಿ ಷೇರುಪೇಟೆಗಳಲ್ಲಿಯೂಅದು ಪ್ರತಿಫಲಿಸಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 168 ಅಂಶ ಹೆಚ್ಚಾಗಿ 30,196 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 56 ಅಂಶ ಹೆಚ್ಚಾಗಿ 8,879 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗರಿಷ್ಠ ಗಳಿಕೆ: ದಿನದ ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್‌ ಷೇರು ಶೇ 11ರಷ್ಟು ಗರಿಷ್ಠ ಗಳಿಕೆ ಕಂಡಿತು.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 25 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹75.66 ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.