ADVERTISEMENT

ಸೂಚ್ಯಂಕ ಅಲ್ಪ ಇಳಿಕೆ: ಯೆಸ್‌ ಬ್ಯಾಂಕ್‌ ಷೇರು ಗರಿಷ್ಠ ನಷ್ಟ

ಪಿಟಿಐ
Published 18 ನವೆಂಬರ್ 2019, 14:52 IST
Last Updated 18 ನವೆಂಬರ್ 2019, 14:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸೋಮವಾರ ಇಳಿಮುಖ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 72 ಅಂಶ ಇಳಿಕೆಯಾಗಿ 40,284 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 11 ಅಂಶ ಇಳಿಕೆ ಕಂಡು 11,884 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರವು ಇನ್ನಷ್ಟು ಇಳಿಕೆ ಕಾಣಲಿದೆ ಎಂದು ಸಂಶೋಧನಾ ವರದಿಗಳು ಹೇಳಿವೆ. ಹೀಗಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಚಟುವಟಿಕೆ ನಡೆದರೂ ದೇಶಿ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಕಾಣುವಂತಾಯಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ADVERTISEMENT

ಗರಿಷ್ಠ ನಷ್ಟ: ಯೆಸ್‌ ಬ್ಯಾಂಕ್‌ ಷೇರುಗಳು ಶೇ 4.08ರಷ್ಟು ಗರಿಷ್ಠ ನಷ್ಟ ಅನುಭವಿಸಿತು. ಬಜಾಜ್‌ ಆಟೊ, ಮಹೀಂದ್ರಾ, ಹೀರೊ ಮೋಟೊಕಾರ್ಪ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಒಎನ್‌ಜಿಸಿ ಮತ್ತು ಟಿಸಿಎಸ್‌ ಕಂಪನಿಗಳ ಷೇರುಗಳು ಶೇ 2.05ರಷ್ಟು ಇಳಿಕೆಯಾಗಿವೆ.

ರೂಪಾಯಿ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 6 ಪೈಸೆ ಇಳಿಕೆ ಕಂಡು ಒಂದು ಡಾಲರ್‌ಗೆ ₹ 71.84ರಂತೆ ವಿನಿಮಯಗೊಂಡಿತು.

ವಹಿವಾಟಿನ ವಿವರ

* ₹ 271 ಕೋಟಿ – ವಿದೇಶಿ ಬಂಡವಾಳ ಹೊರಹರಿವು

* ₹ 152 ಲಕ್ಷ ಕೋಟಿ – ಷೇರುಪೇಟೆಯ ಬಂಡವಾಳ ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.