ADVERTISEMENT

ಅಮೆರಿಕದ ಸುಂಕ: ಸೆನ್ಸೆಕ್ಸ್ 296 ಅಂಶ ಇಳಿಕೆ

ಪಿಟಿಐ
Published 31 ಜುಲೈ 2025, 15:56 IST
Last Updated 31 ಜುಲೈ 2025, 15:56 IST
   

ಮುಂಬೈ: ಭಾರತದ ಸರಕುಗಳ ಮೇಲೆ ಅಮೆರಿಕವು ಶೇ 25ರಷ್ಟು ಸುಂಕ ವಿಧಿಸಿರುವುದರ ಪರಿಣಾಮವು ಗುರುವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆಗಳಲ್ಲಿ ಕಂಡುಬಂತು. ದಿನದ ವಹಿವಾಟಿನಲ್ಲಿ ಸೂಚ್ಯಂಕಗಳು ಇಳಿಕೆ ಕಂಡವು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 296 ಅಂಶ ಇಳಿಕೆಯಾಗಿ, 81,185ಕ್ಕೆ ವಹಿವಾಟು ಅಂತ್ಯಗೊಂಡಿದೆ. ವಹಿವಾಟಿನ ನಡುವೆ ಸೂಚ್ಯಂಕವು 786 ಅಂಶಗಳವರೆಗೆ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 86 ಅಂಶ ಕಡಿಮೆಯಾಗಿ, 24,768ಕ್ಕೆ ಕೊನೆಗೊಂಡಿದೆ.  

ಟಾಟಾ ಸ್ಟೀಲ್‌, ಸನ್‌ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್, ಅದಾನಿ ಪೋರ್ಟ್ಸ್, ಎನ್‌ಟಿಪಿಸಿ ಮತ್ತು ಏಷ್ಯನ್ ಪೇಂಟ್ಸ್ ಷೇರಿನ ಮೌಲ್ಯದಲ್ಲಿ ಇಳಿಕೆ ಆಗಿದೆ. ಹಿಂದೂಸ್ತಾನ್ ಯೂನಿಲಿವರ್, ಎಟರ್ನಲ್, ಐಟಿಸಿ, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಪವರ್ ಗ್ರಿಡ್ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.74ರಷ್ಟು ಕಡಿಮೆಯಾಗಿದೆ. ಪ್ರತೀ ಬ್ಯಾರೆಲ್ ದರವು 72.70 ಡಾಲರ್ ಆಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರದ ವಹಿವಾಟಿನಲ್ಲಿ ₹850 ಕೋಟಿಯಷ್ಟು ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.