ADVERTISEMENT

ಷೇರುಪೇಟೆ: ಸೆನ್ಸೆಕ್ಸ್ 823 ಅಂಶ ಇಳಿಕೆ

ಪಿಟಿಐ
Published 12 ಜೂನ್ 2025, 13:19 IST
Last Updated 12 ಜೂನ್ 2025, 13:19 IST
ಸೆನ್ಸೆಕ್ಸ್
ಸೆನ್ಸೆಕ್ಸ್   

ಮುಂಬೈ: ದೇಶದ ಷೇರು ಸೂಚ್ಯಂಕಗಳು ಗುರುವಾರದ ವಹಿವಾಟಿನಲ್ಲಿ ಶೇ 1ಕ್ಕೂ ಹೆಚ್ಚು ಕುಸಿತ ಕಂಡಿವೆ.

ಇಸ್ರೇಲ್ ಮತ್ತು ಇರಾನ್‌ ನಡುವಿನ ಬಿಕ್ಕಟ್ಟು, ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ಅಮೆರಿಕದ ಸುಂಕ ಹೆಚ್ಚಳದ ಅನಿಶ್ಚಿತ ಸ್ಥಿತಿಯು ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ದೇಶದ ಹೂಡಿಕೆದಾರರು ತೈಲ ಮತ್ತು ಅನಿಲ, ವಿದ್ಯುತ್, ಬಂಡವಾಳ ಸರಕುಗಳ ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ವಿದೇಶಿ ಬಂಡವಾಳದ ಹೊರಹರಿವು ಸಹ ಸೂಚ್ಯಂಕಗಳ ಇಳಿಕೆಗೆ ಕಾರಣವಾಯಿತು ಎಂದು ಹೇಳಿದ್ದಾರೆ.

ADVERTISEMENT

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 823 ಅಂಶ (ಶೇ 1) ಇಳಿಕೆಯಾಗಿ, 81,691ಕ್ಕೆ ವಹಿವಾಟು ಅಂತ್ಯಗೊಂಡಿದೆ. ದಿನದ ವಹಿವಾಟಿನಲ್ಲಿ 991 ಅಂಶದವರೆಗೆ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 253 ಅಂಶ (ಶೇ 1.01) ಕಡಿಮೆಯಾಗಿ, 24,888ಕ್ಕೆ ಕೊನೆಗೊಂಡಿದೆ.

ಟಾಟಾ ಮೋಟರ್ಸ್‌, ಟೈಟನ್, ಎಟರ್ನಲ್‌, ಪವರ್ ಗ್ರಿಡ್‌, ಟಾಟಾ ಸ್ಟೀಲ್, ಲಾರ್ಸೆನ್ ಆ್ಯಂಡ್ ಟೊಬ್ರೊ, ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಹಿಂದೂಸ್ತಾನ್ ಯುನಿಲಿವರ್ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. ಬಜಾಜ್‌ ಫಿನ್‌ಸರ್ವ್‌, ಏಷ್ಯನ್‌ ಪೇಂಟ್ಸ್ ಮತ್ತು ಟೆಕ್ ಮಹೀಂದ್ರ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರದ ವಹಿವಾಟಿನಲ್ಲಿ ₹446 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 1.43ರಷ್ಟು ಇಳಿಕೆಯಾಗಿದೆ. ಪ್ರತೀ ಬ್ಯಾರೆಲ್‌ ದರ 68.77 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.