ADVERTISEMENT

143 ಅಂಶ ಕುಸಿದ ಸೂಚ್ಯಂಕ

ಪಿಟಿಐ
Published 10 ಜುಲೈ 2020, 11:37 IST
Last Updated 10 ಜುಲೈ 2020, 11:37 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ಏಷ್ಯಾದ ಷೇರುಪೇಟೆಗಳಲ್ಲಿನ ಖರೀದಿ ನಿರುತ್ಸಾಹ ಮತ್ತು ಹಣಕಾಸು ಷೇರುಗಳಲ್ಲಿನ ನಷ್ಟದ ಪರಿಣಾಮವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 143 ಅಂಶಗಳ ನಷ್ಟ ಕಂಡಿತು.

ಬಿಎಸ್‌ಇ ಸೂಚ್ಯಂಕವು 36,594 ಅಂಶಗಳಲ್ಲಿ ಮತ್ತು ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 45 ಅಂಶ ಕಳೆದುಕೊಂಡು 10,768 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದವು.

ಆ್ಯಕ್ಸಿಸ್‌ ಬ್ಯಾಂಕ್‌ ಷೇರು ಗರಿಷ್ಠ (ಶೇ 3) ನಷ್ಟ ಕಂಡಿತು. ಇಂಡಸ್‌ಇಂಡ್‌ ಬ್ಯಾಂಕ್‌, ಟೈಟಾನ್‌, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌, ಒಎನ್‌ಜಿಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳೂ ನಷ್ಟಕ್ಕೆ ಗುರಿಯಾದವು.

ADVERTISEMENT

ರಿಲಯನ್ಸ್‌ ಇಂಡಸ್ಟ್ರೀಸ್‌, ಸನ್‌ ಫಾರ್ಮಾ, ಎಚ್‌ಯುಎಲ್‌, ಭಾರ್ತಿ ಏರ್‌ಟೆಲ್‌ ಮತ್ತು ಟಿಸಿಎಸ್‌ ಷೇರುಗಳು ಲಾಭ ಮಾಡಿಕೊಂಡವು.

ದೇಶಿ ಷೇರುಪೇಟೆಗಳ ವಹಿವಾಟು ಏಷ್ಯಾದ ಷೇರುಪೇಟೆಗಳಲ್ಲಿನ ಖರೀದಿ ನಿರುತ್ಸಾಹದಿಂದ ಪ್ರಭಾವಿತಗೊಂಡಿದೆ. ಕೋವಿಡ್‌ ಪ್ರಕರಣಗಳಲ್ಲಿನ ಹೆಚ್ಚಳ ಮತ್ತು ಆರ್ಥಿಕ ಚೇತರಿಕೆ ಮೇಲೆ ಈ ವಿದ್ಯಮಾನವು ಬೀರಬಹುದಾದ ಪ್ರಭಾವದ ಕುರಿತು ವಹಿವಾಟುದಾರರಲ್ಲಿ ಆತಂಕ ಮನೆ ಮಾಡಿದೆ ಎಂದು ಪೇಟೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.